ಭಾರತಕ್ಕೆ ಬಂದ ಕ್ವೀನ್ಸ್ ಬ್ಯಾಟನ್ ರಿಲೇ
Team Udayavani, Jan 13, 2022, 5:55 AM IST
ಹೊಸದಿಲ್ಲಿ: ಭಾರತಕ್ಕೆ ಆಗಮಿಸಿದ ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನ ಕ್ವೀನ್ಸ್ ಬ್ಯಾಟನ್ ರಿಲೇಗೆ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಕುಸ್ತಿಪಟು ರವಿ ದಹಿಯಾ ಬುಧವಾರ ಚಾಲನೆ ನೀಡಿದರು.
“ಬ್ಯಾಟನ್ ರಿಲೇ ಸಮಾರಂಭದ ಒಂದು ಭಾಗವಾಗಿದ್ದಕ್ಕೆ ಬಹಳ ಖುಷಿಯಾಗುತ್ತಿದೆ. ಗೇಮ್ಸ್‌ಗೆ ನಾನು ಕಠಿನ ಅಭ್ಯಾಸ ನಡೆಸುತ್ತಿದ್ದು, ಚಿನ್ನ ಗೆಲ್ಲುವ ವಿಶ್ವಾಸವಿದೆ’ ಎಂಬುದಾಗಿ ರವಿ ದಹಿಯಾ ಹೇಳಿದ್ದಾರೆ. ಜು. 28ರಿಂದ ಆ. 8ರ ತನಕ ಗೇಮ್ಸ್ ನಡೆಯಲಿದೆ.
ಬುಧವಾರದ ಸಮಾರಂಭದಲ್ಲಿ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ನರೀಂದರ್ ಬಾತ್ರಾ, ಕಾರ್ಯದರ್ಶಿ ರಾಜೀವ್ ಮೆಹ್ತಾ, ಭಾರತದಲ್ಲಿನ ಬ್ರಿಟಿಷ್ ರಾಯ ಭಾರಿ ಅಲೆಕ್ಸ್ ಎಲ್ಲಿಸ್ ಮೊದಲಾದವರು ಉಪಸ್ಥಿತರಿದ್ದರು.
ಜ. 14ರಂದು ಬೆಂಗಳೂರಿಗೆ
ಕೋವಿಡ್ ಕಾರಣದಿಂದ ಈ ಬಾರಿಯ ರಿಲೇ ಕೇವಲ ಸಾಂಕೇತಿಕವಾಗಿ ನಡೆಯಲಿದೆ. ಜ. 14ರಂದು ಬೆಂಗಳೂರಿಗೆ ಹಾಗೂ ಜ. 15ರಂದು ಭುವನೇಶ್ವರಕ್ಕೆ ಬ್ಯಾಟನ್ ರಿಲೇ ಆಗಮಿಸಲಿದೆ. ಕೋವಿಡ್‌ನಿಂದಾಗಿ ಜ. 13ರ ಅಹ್ಮದಾಬಾದ್ ಕಾರ್ಯಕ್ರಮ ರದ್ದುಗೊಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಏಷ್ಯಾ ಕಪ್ ಕ್ರಿಕೆಟ್: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್
ಭಾರತದೆದುರಿನ ಪಂದ್ಯದಲ್ಲಿ ಒತ್ತಡ ಯಾವಾಗಲೂ ಇರುತ್ತದೆ: ಬಾಬರ್ ಅಜಮ್
ನಿಗದಿತ ದಿನಕ್ಕಿಂತ ಮೊದಲೇ ಆರಂಭವಾಗಲಿದೆ ಕತಾರ್ ಫುಟ್ ಬಾಲ್ ವಿಶ್ವಕಪ್
ತಂದೆಯ ತ್ಯಾಗದ ಫಲ; ಟ್ರೀಸಾ ಈಗ ಜಾಲಿ: ಮಗಳ ಸಾಧನೆಗಾಗಿ ಶಿಕ್ಷಣ ವೃತ್ತಿ ತೊರೆದ ತಂದೆ
“ಮೈ ಕೇಪ್ಟೌನ್’ ಪರ ರಶೀದ್, ರಬಾಡ, ಲಿವಿಂಗ್ಸ್ಟೋನ್ ಆಟ
MUST WATCH
ಹೊಸ ಸೇರ್ಪಡೆ
ಏಷ್ಯಾ ಕಪ್ ಕ್ರಿಕೆಟ್: ತನ್ನನ್ನು ಕೈಬಿಟ್ಟಿದ್ದನ್ನು ಧನಾತ್ಮಕವಾಗಿ ಯೋಚಿಸುವೆ: ಇಶಾನ್
ಕೆಪಿಟಿಸಿಎಲ್: ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿಲ್ಲ: ಪ್ರಾಧಿಕಾರ
ಟೈಲರ್ ಕನ್ಹಯ್ಯ ಹತ್ಯೆ ಪ್ರಕರಣ: 9ನೇ ಆರೋಪಿಯನ್ನು ಬಂಧಿಸಿದ ಎನ್ಐಎ
ಬಾಂಗ್ಲಾದೇಶಿಯರ ಆಧಾರ್ ದಾಖಲೆ ಪರಿಶೀಲನೆಗೆ ಹೈಕೋರ್ಟ್ ಅನುಮತಿ
ನೂಪುರ್ ಶರ್ಮಾ ಹತ್ಯೆ ಮಾಡಲು ಪಾಕ್ ಉಗ್ರ ಸಂಘಟನೆ ನಿಯೋಜಿಸಿದ್ದ ಉಗ್ರ ಬಂಧನ