ಗಂಗೂಲಿಯೊಂದಿಗೆ ಬಿರುಕು ಶುದ್ಧಸುಳ್ಳು: ರವಿಶಾಸ್ತ್ರಿ

Team Udayavani, Dec 12, 2019, 12:17 AM IST

ಮುಂಬೈ: ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಹಾಗೂ ಭಾರತ ಕ್ರಿಕೆಟ್‌ ತಂಡದ ತರಬೇತುದಾರ ರವಿಶಾಸ್ತ್ರಿ ನಡುವೆ ಭಿನ್ನಮತವಿದೆ ಎಂಬ ಸುದ್ದಿ ನಿಧಾನಕ್ಕೆ ಜೋರಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ರವಿಶಾಸ್ತ್ರಿ, ಇದು ಶುದ್ಧಸುಳ್ಳು, ಮಾಧ್ಯಮಗಳಿಗೆ ಅತ್ಯುತ್ತಮ ಆಹಾರ ಎಂದು ಹೇಳಿದ್ದಾರೆ.

ಗಂಗೂಲಿ-ರವಿಶಾಸ್ತ್ರಿ ನಡುವೆ ಬಹಳ ಹಿಂದಿನಿಂದಲೇ ವಿವಾದವಿದೆ. 2016ರಲ್ಲಿ ಗಂಗೂಲಿ ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಯ ಮುಖ್ಯಸ್ಥರಾಗಿದ್ದರು. ಆ ವೇಳೆ ರವಿಶಾಸ್ತ್ರಿಯ ಬದಲು ಕುಂಬ್ಳೆಯನ್ನು ತರಬೇತುದಾರರಾಗಿ ನೇಮಿಸಿದ್ದರು. ಆಗ ಇಬ್ಬರ ನಡುವೆ ಬಹಿರಂಗ ವಾಕ್ಸಮರ ನಡೆದಿತ್ತು. ಅದಾದ ನಂತರ ಪ್ರಕರಣ ತಣ್ಣಗಾಗಿತ್ತು. ಈಗ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿದ್ದಾರೆ. ರವಿಶಾಸ್ತ್ರಿ ಮತ್ತೆ ತರಬೇತುದಾರರಾಗಿದ್ದಾರೆ. ಆದ್ದರಿಂದ ಇಬ್ಬರ ನಡುವಿನ ಹಳೆಯ ಸಿಟ್ಟು ಜೋರಾಗಿದೆ ಎಂಬ ವರದಿಗಳಾಗುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರವಿಶಾಸ್ತ್ರಿ, ಸೌರವ್‌ ಗಂಗೂಲಿಯ ಕ್ರಿಕೆಟ್‌ ಸಾಧನೆಗಳ ಬಗ್ಗೆ ನನಗೆ ಬಹಳ ಗೌರವವಿದೆ. ಅವರು ಬಹಳ ಕಷ್ಟದ ಸಮಯದಲ್ಲಿ ಭಾರತ ಕ್ರಿಕೆಟ್‌ನ ಚುಕ್ಕಾಣಿ ಹಿಡಿದಿದ್ದಾರೆ. ಅದಕ್ಕೆಲ್ಲ ಜನರ ನಂಬಿಕೆಯಿದ್ದರೆ ಮಾತ್ರ ಸಾಧ್ಯ. ಗಂಗೂಲಿಯ ಬಗ್ಗೆ ನನಗೆ ಗೌರವವಿಲ್ಲವೆಂದು ಜನ ಭಾವಿಸಿದ್ದರೆ, ಅದು ಮುಟಾuಳತನದ ಪರಮಾವಧಿ ಎಂದು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ