ಚೆನ್ನೈ ಸೂಪರ್ ಕಿಂಗ್ಸ್ ಪರವೇ ರವೀಂದ್ರ ಜಡೇಜ ಆಟ?
Team Udayavani, Nov 4, 2022, 11:27 PM IST
ಚೆನ್ನೈ: ಕಳೆದ ಐಪಿಎಲ್ನಲ್ಲಿ ರವೀಂದ್ರ ಜಡೇಜ ಕೆಲವು ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ಗೆ ನಾಯಕತ್ವ ವಹಿಸಿದ್ದರು. ತಂಡ ಹೀನಾಯ ವೈಫಲ್ಯ ಎದುರಿಸಿದ್ದರಿಂದ ಧೋನಿ ನಾಯಕತ್ವ ಮರಳಿ ಪಡೆದಿದ್ದರು. ಈ ನಡುವೆ ಧೋನಿ-ಜಡೇಜ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂಬ ಸುದ್ದಿಗಳು ಹರಿದಾಡಿದ್ದವು. ಕಳೆದ ಸೀಸನ್ನ ಕಡೆಯ ಕೆಲವು ಪಂದ್ಯಗಳಲ್ಲಿ ಜಡೇಜ ಆಡದಿದ್ದುದ್ದೇ ಇದಕ್ಕೆ ಕಾರಣ. ಇವೆಲ್ಲದರ ಮಧ್ಯೆ ರವೀಂದ್ರ ಜಡೇಜ ಮುಂದಿನ ಬಾರಿ ಮತ್ತೆ ಚೆನ್ನೈ ಪರವೇ ಆಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.
ಜಡೇಜ ಬೇರೆ ಫ್ರಾಂಚೈಸಿಗೆ ತೆರಳಲಿದ್ದಾರೆ ಎಂಬ ಸುದ್ದಿ ಹುಟ್ಟಿಕೊಂಡ ಬೆನ್ನಲ್ಲೇ ಇಂಥದೊಂದು ಖಚಿತ ಮಾಹಿತಿ ಹೊರಬಿದ್ದಿದೆ. ಕಳೆದ ಬಾರಿ ಅವರನ್ನು ತಂಡದ ನಾಯಕತ್ವದಿಂದ ಕಿತ್ತುಹಾಕಲಾಗಿತ್ತು. ಆದರೆ ಅವರೇ ಬಿಟ್ಟುಕೊಟ್ಟರು ಎಂದು ಸುದ್ದಿಯಾಗಿತ್ತು. ಅನಂತರ ಅವರು ತಂಡದಿಂದಲೇ ಹೊರಬಿದ್ದಿದ್ದರು. ಅನಂತರ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಿಂದ ಚೆನ್ನೈಗೆ ಸಂಬಂಧಿಸಿದ್ದ ಎಲ್ಲ ಪೋಸ್ಟ್ಗಳನ್ನು ಅಳಿಸಿ ಹಾಕಿದ್ದರು.
ಅಲ್ಲಿಗೆ ಅವರ ಮತ್ತು ಕಿಂಗ್ಸ್ ನಡುವಿನ ಸಂಬಂಧ ಹಳಸಿದ್ದು ಖಚಿತವಾಗಿತ್ತು.ಆದರೆ ಧೋನಿಗೆ ಜಡೇಜ ತಮ್ಮೊಂದಿಗಿರಬೇಕೆಂಬ ಬಯಕೆ ಇದೆಯಂತೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಅಕ್ಷರ್ ಪಟೇಲ್ ಅವರನ್ನು ಪಡೆದು, ಜಡೇಜ ಅವರನ್ನು ಅಲ್ಲಿಗೆ ಕಳುಹಿಸಿಕೊಡುವುದಕ್ಕೂ ಧೋನಿ ಸಿದ್ಧವಿಲ್ಲ. ಅವರಿಗೆ ಜಡೇಜ ಸಾಮರ್ಥ್ಯದ ಮೇಲೆ ಅಷ್ಟೊಂದು ನಂಬಿಕೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ