ಆರ್ ಸಿಬಿ – ಮುಂಬೈ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ
Team Udayavani, Sep 28, 2020, 7:04 PM IST
ದುಬೈ: ಆರ್ ಸಿಬಿ – ಮುಂಬೈ ನಡುವಿನ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದೆ.
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಉಪನಾಯಕ ರೋಹಿತ್ ಶರ್ಮಾ ನಡುವಿನ ಐಪಿಎಲ್ ತಂಡಗಳ ಕಾಳಗಕ್ಕೆ ದುಬೈ ಅಂಕಣ ಸಿದ್ಧವಾಗಿದೆ. ಆರ್ ಸಿಬಿ ಇದುವರೆಗೆ 2 ಪಂದ್ಯಗಳನ್ನು ಆಡಿದ್ದು ಮೊದಲ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಗೆಲುವು ಸಾಧಿಸಿತ್ತು. ಬಳಿಕ ಎರಡನೇ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಹೀನಾಗಿ ಸೋತಿತ್ತು.
ಮುಂಬೈ ವಿರುದ್ಧ ಪಂದ್ಯಕ್ಕೆ ಆರ್ ಸಿಬಿ ಒಳ್ಳೆಯ ಯೋಜನೆ ಹಾಕಿಕೊಂಡಿದ್ದು.ಎರಡು ವೇಗಿಗಳ ಜೊತೆ ಓರ್ವ ಸ್ಪಿನ್ನರ್ ರನ್ನು ಈ ಬಾರಿ ಸೇರಿಸಿಕೊಂಡಿದೆ. ಉಮೇಶ್ ಯಾದವ್ ಹಾಗೂ ಡೆಲ್ ಸ್ಟೇನ್ ಹಾಗೂ ಫಿಲಿಪ್ ರನ್ನು ವಿಶ್ರಾಂತಿ ನೀಡಿ ಶ್ರೀಲಂಕಾದ ವೇಗಿ ಇಸುರು ಉದಾನ ಹಾಗೂ ಗುರ್ಕೀರತ್ ಸಿಂಗ್ ಮನ್ ಜೊತೆಗೆ ಸ್ಪಿನ್ ಬೌಲಿಂಗ್ ಗೆ ಬಲ ತುಂಬಲು ಆ್ಯಡಂ ಜಂಪಾರನ್ನು ಆಯ್ಕೆ ಮಾಡಿಕೊಂಡಿದೆ.
ಆರ್ ಸಿ ಬಿ ಪ್ಲೇಯಿಂಗ್ 11 : ದೇವದತ್ತ್ ಪಡಿಕ್ಕಲ್, ಆರನ್ ಫಿಂಚ್, ವಿರಾಟ್ ಕೊಹ್ಲಿ (ಕ್ಯಾಪ್ಟನ್), ಎಬಿ ಡಿವಿಲಿಯರ್ಸ್ (ಪ), ಶಿವಮ್ ದುಬೆ, ವಾಷಿಂಗ್ಟನ್ ಸುಂದರ್, ಇಸುರು ಉದಾನಾ, ಗುರ್ಕೀರತ್ ಸಿಂಗ್ ಮನ್, ನವದೀಪ್ ಸೈನಿ, ಯುಜ್ವೇಂದ್ರ ಚಾಹಲ್, ಆ್ಯಡಂ ಜಂಪಾ.
13 ನೇ ಆವೃತ್ತಿಯ ಮೊದಲ ಪಂದ್ಯವನ್ನು ಆಡಿ ಚೆನ್ನೈ ವಿರುದ್ದ ಸೋತಿದ್ದ ರೋಹಿತ್ ಪಡೆ. ಎರಡನೇ ಪಂದ್ಯದಲ್ಲಿ ಬೌಲಿಂಗ್ ನಲ್ಲಿ ಮ್ಯಾಜಿಂಗ್ ಮಾಡಿ ಕೆಕೆಆರ್ ವಿರುದ್ಧ ಜಯಭೇರಿ ಆಗಿತ್ತು.
ಮುಂಬೈ ಇಂಡಿಯನ್ಸ್ ಹೆಚ್ಚೇನು ಬದಲಾವಣೆ ಮಾಡಿಕೊಳ್ಳದೆ. ಸೌರಭ್ ತಿವಾರಿಯನ್ನು ಹೊರಗಿಟ್ಟು ಯುವ ಪ್ರತಿಭೆ ಇಶಾನ್ ಕಿಶನ್ ರನ್ನು ಆಯ್ಕೆ ಮಾಡಿಕೊಂಡಿದೆ.
ಮುಂಬೈ ಪ್ಲೇಯಿಂಗ್ 11 : ಕ್ವಿಂಟನ್ ಡಿ ಕಾಕ್ (ಕೀ), ರೋಹಿತ್ ಶರ್ಮಾ (ಕ್ಯಾಪ್ಟನ್), ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕ್ರುನಾಲ್ ಪಾಂಡ್ಯ, ರಾಹುಲ್ ಚಹರ್, ಜೇಮ್ಸ್ ಪ್ಯಾಟಿನ್ಸನ್, ಟ್ರೆಂಟ್ ಬೌಲ್ಟ್, ಜಸ್ಪ್ರೀತ್ ಬುಮ್ರಾ