ಆರ್‌ಸಿಬಿ ನೂತನ ಲಾಂಛನ ಬಿಡುಗಡೆ

Team Udayavani, Feb 15, 2020, 7:12 AM IST

ಬೆಂಗಳೂರು: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ (ಆರ್‌ಸಿಬಿ) ಶುಕ್ರವಾರ ನೂತನ ಲಾಂಛನವನ್ನು ಬಿಡುಗಡೆ ಮಾಡಿದೆ. ಆದರೆ ತಂಡದ ಹೆಸರಿನಲ್ಲಿ ದೊಡ್ಡ ಬದಲಾವಣೆ ಮಾಡಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.

ತನ್ನ ಅಧಿಕೃತ ಟ್ವಿಟರ್‌, ಫೇಸ್‌ಬುಕ್‌, ಇನ್ಸ್‌ಟಾಗ್ರಾಮ್‌ ಖಾತೆಗಳಲ್ಲಿ ಹಿಂದಿನ ಚಿಹ್ನೆಯನ್ನು ತೆಗೆದುಹಾಕಿ ಹೊಸ ಬದಲಾವಣೆಯೊಂದಿಗೆ ಬರಲಿದ್ದೇವೆ ಎಂದು ಸಾರುವ ಮೂಲಕ ಕಳೆದೆರಡು ದಿನಗಳಿಂದ ಆರ್‌ಸಿಬಿ ಫ್ರಾಂಚೈಸಿ ಕುತೂಹಲ ಮೂಡಿಸಿತ್ತು. ಈಗ ತಂಡದ ಅಧಿಕೃತ ಚಿಹ್ನೆಯಲ್ಲಿ ಸಿಂಹವನ್ನು ಪೂರ್ಣ ಪ್ರಮಾಣದಲ್ಲಿ ಬಳಸುವ ಮೂಲಕ ಬದಲಾವಣೆ ಮಾಡಿಕೊಂಡಿದೆ. ಹೊಸ ಕನಸಿನೊಂದಿಗೆ ಮುಂದಿನ ಐಪಿಎಲ್‌ನಲ್ಲಿ ಕಾದಾಟ ನಡೆಸಲು ಸಜ್ಜಾಗಿದೆ.

ಭಯವಿಲ್ಲದೆ ಕಾದಾಡುವುದು ನಮ್ಮ ಧ್ಯೇಯ ಎಂದು ಆಡಳಿತ ಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ. ಇನ್ನಾದರೂ ಆರ್‌ಸಿಬಿಗೆ ಅದೃಷ್ಟ ಕೈಹಿಡಿದೀತೇ ಎಂಬುದು ಅಭಿಮಾನಿಗಳ ಕುತೂಹಲ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ