ಕನ್ನಡ ನಟಿ ಜತೆ ಚಾಹಲ್ ವಿವಾಹ ?
Team Udayavani, Apr 23, 2018, 7:30 AM IST
ಮುಂಬಯಿ: ಬಾಲಿವುಡ್ ನಟಿ ಜತೆ ಪ್ರೀತಿಯ ಬಂಧನಕ್ಕೆ ಸಿಲುಕಿದ ವಿರಾಟ್ ಕೊಹ್ಲಿ, ಹರ್ಭಜನ್, ಜಹೀರ್ ಖಾನ್ ಸಾಲಿಗೆ ಈಗ ಯುಜುವೇಂದ್ರ ಚಾಹಲ್ ಸೇರಿದ್ದಾರೆ.
ಚಾಹಲ್ ಸದ್ಯ ದಕ್ಷಿಣ ಭಾರತದ ನಟಿ ತನಿಷ್ಕಾ ಕಪೂರ್ ಜತೆ ತಿರುಗಾಡುತ್ತಿದ್ದಾರೆ ಎಂದು ಸುದ್ದಿ ಹರಡುತ್ತಿದೆ ಮಾತ್ರವಲ್ಲದೇ ಸದ್ಯವೇ ವಿವಾಹವಾಗಲಿದ್ದಾರೆಂದು ತಿಳಿದುಬಂದಿದೆ. ತನಿಷ್ಕಾ ಕಪೂರ್ ಕನ್ನಡ ಚಿತ್ರದಲ್ಲೂ ನಟಿಸಿದ್ದಾರೆ.
ಚಾಹಲ್ ಸದ್ಯ ಸಾಗುತ್ತಿರುವ ಐಪಿಎಲ್ನನಲ್ಲಿ ಆರ್ಸಿ ಬೆಂಗಳೂರು ಪರ ಆಡುತ್ತಿದ್ದಾರೆ. ಐಪಿಎಲ್ ಮುಗಿದ ಬಳಿಕ ವಿವಾಹವಾಗುವ ಸಾಧ್ಯತೆಯಿದೆ. ಆಬಳಿಕ ಚಾಹಲ್ ಇಂಗ್ಲೆಂಡ್ ಪ್ರವಾಸಗೈಯುವ ಭಾರತೀಯ ತಂಡದಲ್ಲಿ ಸೇರಿಕೊಳ್ಳಲಿದ್ದಾರೆ.
ಕೆಲವು ಸಂರ್ದಗಳಲ್ಲಿ ಚಾಹಲ್ ಮತ್ತು ತನಿಷ್ಕಾ ಜತೆಯಾಗಿ ತಿರುಗಾಡುತ್ತಿರುವುದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಸಾಮಾಜಿನ ಜಾಲತಾಣದಲ್ಲೂ ಈ ಬಗ್ಗೆ ಸುದ್ದಿ ಬರುತ್ತಿವೆ.