ಮತ್ತೆ ಐಪಿಎಲ್‌ ಆಡಲಿದ್ದಾರೆ ಅಂಬಾಟಿ: ನಿವೃತ್ತಿಯಿಂದ ಉಲ್ಟಾ ಹೊಡೆದ ರಾಯುಡು

Team Udayavani, Aug 25, 2019, 10:30 AM IST

ವಿಶ್ವಕಪ್‌ ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬ ಬೇಸರದಿಂದ ಎಲ್ಲಾ ಮಾದರಿಯ ಕ್ರಿಕೆಟ್‌ ನಿಂದ ದೂರ ಸರಿದಿದ್ದ ಅಂಬಾಟಿ ರಾಯುಡು ಈಗ ತನ್ನ ನಿರ್ಧಾರದಿಂದ ಯೂ ಟರ್ನ್‌ ಹೊಡೆದಿದ್ದಾರೆ. ಮುಂದಿನ ಸೀಸನ್‌ ನ ಐಪಿಎಲ್‌ ನಲ್ಲಿ ಮತ್ತೆ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಅಡುವುದಾಗಿ ಹೇಳಿಕೆ ನೀಡಿದ್ದಾರೆ.

33ರ ಹರೆಯದ ಹೈದರಾಬಾದ್‌ ಮೂಲದ ಆಟಗಾರ, ಕಳೆದ ತಿಂಗಳು ಎಲ್ಲಾ ಮಾದರಿಯ ಕ್ರಿಕೆಟಗೆ ವಿದಾಯ ಹೇಳಿದ್ದರು. ವಿಶ್ವಕಪ್‌ ತಂಡಕ್ಕೆ ತನ್ನನ್ನು ಪರಿಗಣಿಸದೇ ಇರುವುದಕ್ಕೆ ಬೇಸರಗೊಂಡಿದ್ದ ಅವರು ನಂತರ ಶಿಖರ್‌ ಧವನ್‌ ಗಾಯದಿಂದ ಹೊರಬಿದ್ದಾಗ ಅವರ ಬದಲು ರಿಷಭ್‌ ಪಂತ್‌ ರನ್ನು ಆಯ್ಕೆ ಮಾಡಿದಾಗ ನಿವೃತ್ತಿ ನಿರ್ಧಾರ ಮಾಡಿದ್ದರು. ಆದರೆ ಬಿಸಿಸಿಐ ನಿರ್ಧಾರದಿಂದ ತಾನು ಕೋಪಗೊಂಡಿರಲಿಲ್ಲ. ಆದರೆ ವಿಶ್ವಕಪ್‌ ಗೆ ಆಯ್ಕೆ ಆಗದೇ ಇರುವುದಕ್ಕೆ ಬೇಸರವಾಗಿದೆ ಎಂದು ರಾಯುಡು ಹೇಳಿಕೆ ನೀಡಿದ್ದಾರೆ.

ಐಪಿಎಲ್‌ ನ ಮುಂದಿನ ಆವೃತ್ತಿಯಲ್ಲಿ ಆಡಲು ಬಯಸಿರುವ ರಾಯುಡು, ನಿಗಧಿತ ಕ್ರಿಕೆಟ್‌ ನಲ್ಲಿ ಮತ್ತೆ ಭಾರತ ತಂಡವನ್ನು ಸೇರುವ ಇರಾದೆ ವ್ಯಕ್ತಪಡಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ