ರ್‍ಯಾಂಕಿಂಗ್: ಆರಕ್ಕೇರಿದ ಪಂತ್
Team Udayavani, May 6, 2021, 6:28 AM IST
ದುಬಾೖ: ಟೀಮ್ ಇಂಡಿಯಾದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ರಿಷಭ್ ಪಂತ್ ನೂತನ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಭರ್ಜರಿ ಪ್ರಗತಿ ಸಾಧಿಸಿ ಜಂಟಿ 6ನೇ ಸ್ಥಾನಕ್ಕೆ ನೆಗೆದಿದ್ದಾರೆ. ಕಪ್ತಾನ ವಿರಾಟ್ ಕೊಹ್ಲಿಗಿಂತ ಒಂದು ಸ್ಥಾನ ಕೆಳಗಿದ್ದಾರೆ. ಕೊಹ್ಲಿ ಐದರಲ್ಲೇ ಉಳಿದಿದ್ದಾರೆ.
6ನೇ ಸ್ಥಾನದಲ್ಲಿರುವ ಉಳಿದಿಬ್ಬರೆಂದರೆ ರೋಹಿತ್ ಶರ್ಮ ಮತ್ತು ಹೆನ್ರಿ ನಿಕೋಲ್ಸ್. ಮೂವರೂ ತಲಾ 747 ಅಂಕ ಹೊಂದಿದ್ದಾರೆ.
ನ್ಯೂಜಿಲ್ಯಾಂಡಿನ ಕೇನ್ ವಿಲಿಯಮ್ಸನ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಅನಂತರದ ಸ್ಥಾನದಲ್ಲಿರುವವರು ಸ್ಟೀವ್ ಸ್ಮಿತ್, ಮಾರ್ನಸ್ ಲಬುಶೇನ್ ಮತ್ತು ಜೋ ರೂಟ್. ಬಾಂಗ್ಲಾ ವಿರುದ್ಧ ಮಿಂಚಿದ ಶ್ರೀಲಂಕಾ ನಾಯಕ ದಿಮುತ್ ಕರುಣರತ್ನೆ 4 ಸ್ಥಾನ ಮೇಲೇರಿ 11ಕ್ಕೆ ಬಂದಿದ್ದಾರೆ.