ಪಂತ್ ಮತ್ತೂಬ್ಬ ಗಿಲ್ ಕ್ರೀಸ್ಟ್
Team Udayavani, Jan 6, 2019, 12:45 AM IST
ಸಿಡ್ನಿ: ಇಲ್ಲಿ ನಡೆಯುತ್ತಿರುವ ಆಸೀಸ್ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಭಾರತದ ಪರ 159 ರನ್ ಗಳಿಸಿದ ರಿಷಬ್ ಪಂತ್ ಅವರು ಮತ್ತೂಬ್ಬ ಆ್ಯಡಮ್ ಗಿಲ್ಕ್ರಿಸ್ಟ್ ಎಂದು ಆಸ್ಟ್ರೇಲಿಯಾ ತಂಡ ಮಾಜಿ ನಾಯಕ ರಿಕಿ ಪಾಂಟಿಂಗ್ ಹಾಡಿ ಹೊಗಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಯ ಸಂದರ್ಭದಲ್ಲಿ ರಿಶಬ್ ಜತೆ ಡೆಲ್ಲಿ ತಂಡಕ್ಕಾಗಿ ಕೆಲಸ ಮಾಡಿರುವ ಅನುಭವ ಹೊಂದಿರುವ ಪಾಂಟಿಂಗ್, “”ಆತ (ರಿಷಬ್) ನಿಜಕ್ಕೂ ಪ್ರತಿಭಾನ್ವಿತ ಆಟಗಾರ ಹಾಗೂ ಉತ್ತಮ ಸ್ಟ್ರೈಕರ್. ಉತ್ತಮ ಗೇಮ್ ಸೆನ್ಸ್ ಕೂಡ ಆತನಿಗಿದೆ. ಇಂಥ ವ್ಯಕ್ತಿಗೆ ದೆಹಲಿ ತಂಡಕ್ಕಾಗಿ ತರಬೇತುಗೊಳಿಸಿದ ನಾನೇ ಅದೃಷ್ಟವಂತ” ಎಂದಿದ್ದು, “”ಕಾಮೆಂಟರಿ ಬಾಕ್ಸ್ನಲ್ಲಿ ಕೂತು ಆತನ ಆಟ ನೋಡಿದ ನನಗೆ ಆತ ಮತ್ತೂಬ್ಬ ಗಿಲ್ ಕ್ರಿಸ್ಟ್ ಆಗುತ್ತಾನೆಂದು ಎನಿಸುತ್ತದೆ” ಎಂದು ಹೊಗಳಿದ್ದಾರೆ.