ನಿವೃತ್ತಿ ತಳ್ಳಿಹಾಕಿದ ರೋಜರ್ ಫೆಡರರ್
Team Udayavani, Jan 31, 2017, 3:45 AM IST
ಮೆಲ್ಬರ್ನ್: ಆಸ್ಟ್ರೇಲಿಯ ಓಪನ್ ಗೆಲ್ಲುವ ಮೂಲಕ 18ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿಯ ಒಡೆಯನಾದ ಸ್ವಿಟ್ಸರ್ಲ್ಯಾಂಡ್ನ ಖ್ಯಾತ ಟೆನಿಸಿಗ ರೋಜರ್ ಫೆಡರರ್ ತಮ್ಮ ನಿವೃತ್ತಿ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಈ ಹಿಂದೆ, ಇವರು ನಿವೃತ್ತಿ ತೆಗೆದುಕೊಳ್ಳಲಿದ್ದಾರೆ ಎನ್ನುವ ವರದಿಗಳು ಪ್ರಕಟಗೊಂಡಿದ್ದವು.
35 ವರ್ಷದ ಫೆಡರರ್ಗೆ ಇತ್ತೀಚಿನ ವರ್ಷಗಳಲ್ಲಿ ಭಾರೀ ಸವಾಲು ಎದುರಾಗುತ್ತಿದೆ. ರಫೆಲ್ ನಡಾಲ್, ನೊವಾಕ್ ಜೊಕೋವಿಚ್, ಆ್ಯಂಡಿ ಮರ್ರೆ ಟೆನಿಸ್ನಲ್ಲಿ ಅಬ್ಬರಿಸತೋಡಗಿದ್ದಾರೆ.
ಅಲ್ಲದೇ ಫೆಡರರ್ ಕಳೆದ 5 ವರ್ಷಗಳಿಂದ ಯಾವುದೇ ಗ್ರ್ಯಾನ್ಸ್ಲಾಮ್ ಗೆದ್ದಿರಲಿಲ್ಲ. ಹೀಗಾಗಿ ಆಸ್ಟ್ರೇಲಿಯ ಓಪನ್ ವೇಳೆ ನಿವೃತ್ತಿಯ ಮಾತು ಕೂಡ ಕೇಳಿಬಂದಿತ್ತು. ಆದರೆ ಇದನ್ನು ಫೆಡರರ್ ತಳ್ಳಿಹಾಕಿದ್ದಾರೆ.
“ಆಸ್ಟ್ರೇಲಿಯ ಓಪನ್ ಇದೇ ಕೊನೆಯದು ಎಂದು ಹೇಳಲಾರೆ. ಮುಂದಿನ ವರ್ಷ ಮತ್ತೆ ಸಿಗೋಣ. ಮುಂದಿನ ಫ್ರೆಂಚ್ ಓಪನ್ನತ್ತ ದೃಷ್ಟಿಹರಿಸಿದ್ದೇನೆ. ಸದ್ಯಕ್ಕೆ ನಿವೃತ್ತಿಯ ಯೋಚನೆ ಇಲ್ಲ…’ ಎಂದಿದ್ದಾರೆ ಫೆಡರರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
ಶುಭ ಶುಕ್ರವಾರ: ಸಾಮಾಜಿಕ ನ್ಯಾಯದ ಪ್ರತೀಕ ಯೇಸು ಕ್ರಿಸ್ತ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!