ರೋಜರ್ ಕಪ್ ಆಡದ ರೋಹನ್ ಬೋಪಣ್ಣ
Team Udayavani, Aug 6, 2018, 6:25 AM IST
ಹೊಸದಿಲ್ಲಿ: ಭಾರತದ ಡಬಲ್ಸ್ ಸ್ಪೆಷಲಿಸ್ಟ್ ರೋಹನ್ ಬೋಪಣ್ಣ ಸೋಮವಾರದಿಂದ ಟೊರಂಟೊದಲ್ಲಿ ಆರಂಭವಾಗಲಿರುವ ಎಟಿಪಿ ರೋಜರ್ ಕಪ್ ಟೆನಿಸ್ ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ. ಭುಜದ ನೋವು ಮರುಕಳಿಸದಂತೆ ನೋಡಿಕೊಂಡು ಮುಂಬರುವ ಏಶ್ಯಾಡ್ನಲ್ಲಿ ಆಡುವುದು ಬೋಪಣ್ಣ ಅವರ ಯೋಜನೆಯಾಗಿದೆ.
ಕಳೆದ ವಿಂಬಲ್ಡನ್ ಗ್ರ್ಯಾನ್ಸ್ಲಾಮ್ ಬಳಿಕ ಬೋಪಣ್ಣ ಯಾವುದೇ ಸ್ಪರ್ಧಾತ್ಮಕ ಟೆನಿಸ್ನಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲಿ ಎಡ್ವರ್ಡ್ ರೋಜರ್ ವಸೆಲಿನ್ ಜಗತೆಗೂಡಿ ಕಣಕ್ಕಿಳಿದಿದ್ದ ಬೋಪಣ್ಣ, ದ್ವಿತೀಯ ಸುತ್ತಿನಲ್ಲಿ ಭುಜದ ನೋವಿಗೆ ಒಳಗಾಗಿದ್ದರು.
“ಬೋಪಣ್ಣ ಭುಜದ ನೋವಿನಿಂದ ಚೇತರಿಸಿಕೊಂಡಿದ್ದಾರೆ. ಆದರೆ ಪ್ರತಿಷ್ಠಿತ ಏಶ್ಯಾಡ್ ಮುಂದಿರುವುದರಿಂದ ಒಂದು ವಾರದ ಕೂಟಕ್ಕಾಗಿ ದೂರದ ಯುಎಸ್ಗೆ ಹೋಗುವುದರಲ್ಲಿ ಅರ್ಥವಿಲ್ಲ ಎಂಬುದು ಬೋಪಣ್ಣ ಅವರ ನಿರ್ಧಾರವಾಗಿದೆ’ ಎಂದು ಭಾರತ ತಂಡದ ನಾಯಕ ಜೀಶನ್ ಅಲಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ