ಮತ್ತೆ ಕೋವಿಡ್ ಪಾಸಿಟಿವ್; ರೋಹಿತ್ ಔಟ್ ಜಸ್‌ಪ್ರೀತ್ ಬುಮ್ರಾ ಟೆಸ್ಟ್ ಕ್ಯಾಪ್ಟನ್
Team Udayavani, Jun 29, 2022, 11:33 PM IST
ಲಂಡನ್: ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ ಅವರ ಮತ್ತೊಂದು ಕೋವಿಡ್-19 ಫಲಿತಾಂಶವೂ ಪಾಸಿಟಿವ್ ಬಂದ ಕಾರಣ ಅವರು ಇಂಗ್ಲೆಂಡ್ ಎದುರಿನ 5ನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಉಪನಾಯಕ ಜಸ್‌ಪ್ರೀತ್ ಬುಮ್ರಾ ಟೀಮ್ ಇಂಡಿಯಾವನ್ನು ಮುನ್ನಡೆಸುವ ಬಗ್ಗೆ ವರದಿಯಾಗಿದೆ.
“ಜುಲೈ ಒಂದರಂದು ಆರಂಭ ಆಗಲಿರುವ ಟೆಸ್ಟ್ ಪಂದ್ಯದಿಂದ ರೋಹಿತ್ ಶರ್ಮ ಹೊರಬಿದ್ದಿದ್ದಾರೆ.
ಅವರ ಆರ್‌ಟಿ-ಪಿಸಿಆರ್ ಫಲಿತಾಂಶ ಪುನಃ ಪಾಸಿಟಿವ್ ಬಂದಿದೆ. ಕೆ.ಎಲ್. ರಾಹುಲ್ ಗೈರಲ್ಲಿ ತಂಡದ ಉಪನಾಯಕರಾಗಿರುವ ಜಸ್‌ಪ್ರೀತ್ ಬುಮ್ರಾ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡದ ನಾಯಕತ್ವ ವಹಿಸಲಿದ್ದಾರೆ’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಬೇರ್ಪಟ್ಟಿಲ್ಲ: ದ್ರಾವಿಡ್
ಈ ನಡುವೆ ಕೋಚ್ ರಾಹುಲ್ ದ್ರಾವಿಡ್ ಬೇರೊಂದು ಹೇಳಿಕೆ ನೀಡಿದ್ದು, “ರೋಹಿತ್ ಇನ್ನೂ ಟೆಸ್ಟ್ ಪಂದ್ಯದಿಂದ ಬೇರ್ಪಟ್ಟಿಲ್ಲ. ಬುಧವಾರ ರಾತ್ರಿ ಮತ್ತು ಗುರುವಾರ ಬೆಳಗ್ಗೆ ಇನ್ನೂ ಎರಡು ಟೆಸ್ಟ್ ನಡೆಯಬೇಕಿದೆ. ಇಲ್ಲಿನ ಫಲಿತಾಂಶ ನಿರ್ಣಾಯಕ’ ಎಂದಿದ್ದಾರೆ.
ಬುಮ್ರಾ 36ನೇ ನಾಯಕ
ರೋಹಿತ್ ಲಭ್ಯರಾಗದೇ ಹೋದರೆ ಯಾರ್ಕರ್ ಸ್ಪೆಷಲಿಸ್ಟ್ ಜಸ್‌ಪ್ರೀತ್ ಬುಮ್ರಾ ಭಾರತದ 36ನೇ ಟೆಸ್ಟ್ ನಾಯಕರಾಗಲಿದ್ದಾರೆ. ಅಲ್ಲದೇ 35 ವರ್ಷಗಳ ಸುದೀರ್ಘ ಅವಧಿಯ ಬಳಿಕ ಟೆಸ್ಟ್‌ನಲ್ಲಿ ಭಾರತ ವನ್ನು ಮುನ್ನಡೆಸಲಿರುವ ಮೊದಲ ವೇಗದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರ ರಾಗಲಿದ್ದಾರೆ.
ಕೊನೆಯ ಸಲ (1987) ಭಾರತವನ್ನು ಟೆಸ್ಟ್‌ನಲ್ಲಿ ಮುನ್ನಡೆಸಿದ ವೇಗಿಯೆಂದರೆ ಲೆಜೆಂಡ್ರಿ ಕಪಿಲ್‌ದೇವ್.
ಟೆಸ್ಟ್ ಪಂದ್ಯದ ಬಳಿಕ ಭಾರತ-ಇಂಗ್ಲೆಂಡ್ ನಡುವೆ 3 ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ಮೊದಲ ಪಂದ್ಯಕ್ಕೆ ಐರ್ಲೆಂಡ್ ವಿರುದ್ಧ ಆಯ್ದ ತಂಡವನ್ನೇ ಪರಿಗಣಿಸುವ ಸಾಧ್ಯತೆ ಇದೆ. ಬಳಿಕ ಉಳಿದೆರಡು ಪಂದ್ಯಗಳಿಗೆ ಸ್ಟಾರ್ ಕ್ರಿಕೆಟಿಗರಾದ ರೋಹಿತ್, ಕೊಹ್ಲಿ, ಬುಮ್ರಾ, ಪಂತ್, ಜಡೇಜ ಅವರೆಲ್ಲ ತಂಡವನ್ನು ಕೂಡಿಕೊಳ್ಳುವರೆಂದು ತಿಳಿದು ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬ್ಯಾಡ್ಮಿಂಟನ್ನಲ್ಲಿ ಭಾರತಕ್ಕೆ ಮೂರನೇ ಚಿನ್ನ; ಟಿಟಿಯಲ್ಲಿ ಅಚಂತಾ ಕಮಾಲ್
ಬೆಳ್ಳಿ ಗೆದ್ದ ಮಹಿಳಾ ಕ್ರಿಕೆಟ್ ತಂಡಕ್ಕೆ ಸಚಿವ ಡಾ.ನಾರಾಯಣಗೌಡ ಅಭಿನಂದನೆ
ಬಾಡ್ಮಿಂಟನ್ ಸಿಂಗಲ್ಸ್ ನಲ್ಲಿ ಡಬಲ್ ಸಂಭ್ರಮ: ಸ್ವರ್ಣ ಗೆದ್ದ ಲಕ್ಷ್ಯ ಸೇನ್
ಕಾಮನ್ವೆಲ್ತ್ ಬಾಡ್ಮಿಂಟನ್: ಬಂಗಾರದ ಬರ ನೀಗಿಸಿದ ಪಿ.ವಿ.ಸಿಂಧು
ಕಾಮನ್ವೆಲ್ತ್ ಗೇಮ್ಸ್: ಬಾಕ್ಸಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ ಗೆದ್ದು ಕೊಟ್ಟ ಸಾಗರ್ ಅಹ್ಲಾವತ್