ಸಚಿನ್‌ ದಾಖಲೆ ಮುರಿದ ನೇಪಾಲ್‌ ಬ್ಯಾಟ್ಸಮನ್‌

Team Udayavani, Jan 27, 2019, 12:30 AM IST

ದುಬಾೖ: ನೇಪಾಲದ ಬ್ಯಾಟ್ಸಮನ್‌ ರೋಹಿತ್‌ ಪಂಡೇಲ್‌ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ ಅರ್ಧಶತಕ ಬಾರಿಸಿದ ಯುವ ಆಟಗಾರ ಎಂದೆನಿಸಿಕೊಂಡು ಸಚಿನ್‌ ತೆಂಡುಲ್ಕರ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

16 ವರ್ಷ 146 ದಿನಗಳ ರೋಹಿತ್‌ ಯುನೈಟೆಟ್‌ ಅರಬ್‌ ಅಮಿರೇಟ್ಸ್‌ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 58 ಎಸೆತಗಳಲ್ಲಿ 55 ರನ್‌ ಗಳಿಸಿದ್ದಾರೆ. ಸಚಿನ್‌ ಅವರ ತಮ್ಮ ಚೊಚ್ಚಲ ಅರ್ಧಶತಕವನ್ನು 16 ವರ್ಷ 213 ದಿನಗಳಾಗಿರುವಾಗ ಬಾರಿಸಿದ್ದರು. ಸಚಿನ್‌ ಅವರೊಂದಿಗೆ ಶಾಹಿದ್‌ ಅಫ್ರಿದಿಯ ದಾಖಲೆಯನ್ನು ಕೂಡ ರೋಹಿತ್‌ ಸರಿಗಟ್ಟಿದ್ದಾರೆ. ಶಾಹೀದ್‌ ಅಫ್ರಿದಿ ಶ್ರೀಲಂಕಾ ವಿರುದ್ಧ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದಾಗ ಅವರಿಗೆ 16 ವರ್ಷ 217 ದಿನಗಳಾಗಿತ್ತು.

ಆದರೆ ಪಂಡೇಲ್‌ ಎಲ್ಲ ಅಂತಾರಾಷ್ಟ್ರೀಯ ದಾಖಲೆಯಿಂದ ಬಹಳಷ್ಟು ದೂರವಿದ್ದಾರೆ ಏಕೆಂದರೆ ದಕ್ಷಿಣ ಆಫ್ರಿಕಾದ ವನಿತಾ ಆಟಗಾರ್ತಿ ಜೊಮಾರಿ ಲಟೆನ್‌ಬರ್ಗ್‌ 14ನೇ ವಯಸ್ಸಿನಲ್ಲಿ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟಿನಲ್ಲಿ ಅರ್ಧಶತಕ ಬಾರಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ