ರೋಹಿತ್ ಶರ್ಮ ಕಾಲಿಗೆ ಚೆಂಡಿನೇಟು
Team Udayavani, Nov 2, 2019, 12:07 AM IST
ಹೊಸದಿಲ್ಲಿ: ಶುಕ್ರವಾರದ ಅಭ್ಯಾಸದ ವೇಳೆ ಭಾರತ ತಂಡದ ಉಸ್ತುವಾರಿ ನಾಯಕ ರೋಹಿತ್ ಶರ್ಮ ಕಾಲಿಗೆ ಚೆಂಡು ಬಡಿದಿದ್ದು, ನೋವಿನಿಂದ ಕೂಡಲೇ ಅಂಗಳ ತೊರೆದಿದ್ದಾರೆ.
ಅಭ್ಯಾಸದ ವೇಳೆ ಶ್ರೀಲಂಕಾದ “ತ್ರೋಡೌನ್ ಸ್ಪೆಷಲಿಸ್ಟ್’ ನುವಾನ್ ಸೆನೆವಿರತ್ನೆ ಅತ್ಯಂತ ವೇಗವಾಗಿ ಚೆಂಡನ್ನು ರೋಹಿತ್‌ಗೆ ಎಸೆದರು. ಇದು ಕಾಲಿಗೆ ಬಡಿಯಿತು. ಈ ತೀವ್ರ ವೇಗದ ಬಗ್ಗೆ ಅಸಮಾಧಾನಗೊಂಡ ರೋಹಿತ್, ಗ್ಲೌಸ್ ಕಿತ್ತೆಸೆದು ಮೈದಾನ ಬಿಟ್ಟು ನಡೆದರು. ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮತ್ತು ಸ್ವತಃ ಸೆನೆವಿರತ್ನೆ ಸಮಾಧಾನಪಡಿಸಿದರೂ ರೋಹಿತ್ ಕೇಳುವ ಸ್ಥಿತಿಯಲ್ಲಿರಲಿಲ್ಲ.ಮೈದಾನ ತೊರೆಯುವಾಗ ರೋಹಿತ್ ಶರ್ಮ ಸರಾಗವಾಗಿಯೇ ನಡೆದುಕೊಂಡು ಹೋಗಿದ್ದರು. ಅವರು ಮೊದಲ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂದು ಫಿಸಿಯೋ ತಿಳಿಸಿದ್ದಾರೆ.
ರಿಷಭ್ ಪಂತ್ ಕೀಪಿಂಗ್
ಈ ಸರಣಿಗಾಗಿ ಕೇರಳದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಅವರು ಕ್ಷೇತ್ರರಕ್ಷಣೆ ಅಭ್ಯಾಸ ಮಾಡುತ್ತಿದ್ದರು. ರಿಷಭ್ ಪಂತ್ ಎಂದಿನಂತೆ ಕೀಪಿಂಗ್ ಅಭ್ಯಾಸ ನಡೆಸುತ್ತಿದ್ದರು. ಇದರಿಂದ ಲಯದಲ್ಲಿಲ್ಲದಿದ್ದರೂ ಪಂತ್‌ಗೆ ಕೀಪಿಂಗ್ ಹೊಣೆ ಒಪ್ಪಿಸುವುದು ಖಚಿತವಾಗಿದೆ. ಸ್ಯಾಮ್ಸನ್ ಆಡುವ ಬಳಗದಲ್ಲಿ ಸ್ಥಾನ ಪಡೆಯುವುದು ಅನುಮಾನ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಶಿವಲಿಂಗದ ಕುರಿತು ಅವಹೇಳನಕಾರಿ ಹೇಳಿಕೆ: ಎಐಎಂಐಎಂ ನಾಯಕನ ಬಂಧನ
ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟ
ಪ್ರತಿಷ್ಠೆಗೆ ರಚನೆಯಾದ ತಾಲೂಕುಗಳು ಅನಾಥ; ತಹಶೀಲ್ದಾರ್ ನೇಮಕವಾಗಿಲ್ಲ ,ಆಡಳಿತ ಸೌಧವಿಲ್ಲ
ಚಳ್ಳಕೆರೆಯಲ್ಲಿ ಹನ್ಸ-ಎನ್ಜಿ ಯಶಸ್ವಿ ಪ್ರಯೋಗ; ಸಿಎಸ್ಐಆರ್, ಎನ್ಎಎಲ್ನಿಂದ ವಿಮಾನ ಸಿದ್ಧ
ಸ್ಥ.ಸಂಸ್ಥೆ ಚುನಾವಣೆ: ಒಬಿಸಿ ಮೀಸಲಾತಿಗೆ ಅಸ್ತು; ಮಧ್ಯಪ್ರದೇಶದ ಅರ್ಜಿಗೆ ಸು.ಕೋ.ಒಪ್ಪಿಗೆ