ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೋವಿಡ್ ನಿಂದ ಗುಣಮುಖ
Team Udayavani, Jul 3, 2022, 11:58 PM IST
ಬರ್ಮಿಂಗ್‌ಹ್ಯಾಮ್: ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮ ಕೋವಿಡ್‌ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ.
ಅವರ ಫಲಿತಾಂಶವೀಗ ನೆಗೆಟಿವ್ ಬಂದಿದ್ದು, ಕ್ವಾರಂಟೈನ್‌ನಿಂದ ಹೊರಬಂದಿದ್ದಾರೆ.
ಜು. 7ರಂದು ಆರಂಭವಾಗಲಿರುವ ಟಿ20 ಸರಣಿಗೆ ಲಭ್ಯರಾಗುವರು ಎಂದು ಬಿಸಿಸಿಐ ತಿಳಿಸಿದೆ.
ಲೀಸೆಸ್ಟರ್‌ಶೈರ್ ಎದುರಿನ ಅಭ್ಯಾಸ ಪಂದ್ಯದ ದ್ವಿತೀಯ ದಿನ ರೋಹಿತ್ ಅವರ ಕೋವಿಡ್ ಫಲಿತಾಂಶ ಪಾಸಿಟಿವ್ ಬಂದಿತ್ತು.
ಹೀಗಾಗಿ ಬರ್ಮಿಂಗ್‌ಹ್ಯಾಮ್ ಟೆಸ್ಟ್ ಪಂದ್ಯದಿಂದ ಹೊರಗುಳಿಯುವುದು ಅನಿವಾರ್ಯವಾಯಿತು.