
10 ಸಿಕ್ಸರ್ ಸಿಡಿಸಿ ಹೊಸ ದಾಖಲೆ ಬರೆದ ರೋ’ಹಿಟ್’ ಶರ್ಮಾ
Team Udayavani, Oct 5, 2019, 2:03 PM IST

ವಿಶಾಖಪಟ್ಟಣ: ಟೀಂ ಇಂಡಿಯಾದ ಟೆಸ್ಟ್ ಆರಂಭಿಕ ಆಟಗಾರ ರೊಹಿತ್ ಶರ್ಮಾ ಹೊಸ ಹೊಸ ದಾಖಲೆ ಬರೆಯುತ್ತಿದ್ದಾರೆ. ಆರಂಭಿಕನಾಗಿ ಕಣಕ್ಕಿಳಿದ ಮೊದಲ ಪಂದ್ಯದಲ್ಲೇ ಶತಕ ಸಿಡಿಸಿರುವ ರೋಹಿತ್ ಈಗ ಸಿಕ್ಸರ್ ನಲ್ಲಿ ದಾಖಲೆ ಬರೆದಿದ್ದಾರೆ.
ಮೊದಲ ಇನ್ನಿಂಗ್ಸ್ ನಲ್ಲಿ ಆರು ಭರ್ಜರಿ ಸಿಕ್ಸರ್ ಬಾರಿಸಿ ಮೆರೆದಾಡಿದ್ದ ರೋಹಿತ್ ಎರಡನೇ ಇನ್ನಿಂಗ್ಸ್ ನಲ್ಲೂ ಅದೇ ಜೋಶ್ ನಲ್ಲಿ ಆಡುತ್ತಿದ್ದಾರೆ. ಇನ್ನಿಂಗ್ಸ್ ನ 38ನೇ ಓವರ್ ನವೆರೆಗೆ ರೋಹಿತ್ ನಾಲ್ಕು ಸಿಕ್ಸರ್ ಬಾರಿಸಿದ್ದು, ಪಂದ್ಯದಲ್ಲಿ ಒಟ್ಟು 10 ಸಿಕ್ಸರ್ ಬಾರಿಸಿದ ದಾಖಲೆ ಬರೆದರು.
ಇದು ಭಾರತದ ಆಟಗಾರನೋರ್ವ ಟೆಸ್ಟ್ ಪಂದ್ಯದಲ್ಲಿ ಬಾರಿಸಿದ ಅತೀ ಹೆಚ್ಚು ಸಿಕ್ಸರ್. ಏಕದಿನ ಮತ್ತು ಟಿ ಟ್ವೆಂಟಿ ಕ್ರಿಕಟ್ ನ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್ ಬಾರಿಸಿರುವ ಭಾರತೀಯ ದಾಖಲೆ ಹೊಂದಿರುವ ರೋಹಿತ್ ಈಗ ಮೂರು ಮಾದರಿ ಕ್ರಿಕೆಟ್ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ.
2013ರ ಬೆಂಗಳೂರು ಪಂದ್ಯದಲ್ಲಿ ರೋಹಿತ್ ಬಾರಿಸಿದ್ದ 16 ಸಿಕ್ಸ್ ಏಕದಿನ ಕ್ರಿಕೆಟ್ ನ ದಾಖಲೆಯಾಗಿದ್ದರೆ, 2017ರಲ್ಲಿ ಲಂಕಾ ವಿರುದ್ಧದ ಟಿ ಟ್ವೆಂಟಿ ಪಂದ್ಯದಲ್ಲಿ 10 ಸಿಕ್ಸರ್ ಬಾರಿಸಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
