ಮುಂಬಯಿ ತರಬೇತಿ ಶಿಬಿರಕ್ಕೆ ರೋಹಿತ್ ಶರ್ಮ
Team Udayavani, Jul 23, 2018, 12:13 PM IST
ಮುಂಬಯಿ: ಕ್ರಿಕೆಟ್ ಬಿಡುವಿನ ವೇಳೆಯ ತರಬೇತಿ ಶಿಬಿರ ವನ್ನು ಆಯೋಜಿಸಿರುವ ಮುಂಬಯಿ ಕ್ರಿಕೆಟ್ ಅಸೋಸಿಯೇಶನ್, ಟೆಸ್ಟ್ ತಂಡದಿಂದ ಬೇರ್ಪಟ್ಟ ರೋಹಿತ್ ಶರ್ಮ ಅವರನ್ನೂ ಇದಕ್ಕೆ ಸೇರಿಸಿಕೊಂಡಿದೆ. ಮುಂಬರುವ ದೇಶಿ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಈ ಶಿಬಿರ ನಡೆಯಲಿದೆ.
ಅಜಿಂಕ್ಯ ರಹಾನೆ ಕೂಡ ಈ ಯಾದಿಯಲ್ಲಿದ್ದಾರೆ. ಆದರೆ ಟೆಸ್ಟ್ ತಂಡದ ಉಪನಾಯಕನಾಗಿರುವ ಅವರು ಸದ್ಯ ಇಂಗ್ಲೆಂಡ್ ಪ್ರವಾಸ ದಲ್ಲಿರುವುದರಿಂದ ಈ ಶಿಬಿರದಿಂದ ಹೊರಗುಳಿಯುವರು. ಉಳಿದಂತೆ ಪ್ರತಿಭಾನ್ವಿತ ಆಟಗಾರರಾದ ಶ್ರೇಯಸ್ ಅಯ್ಯರ್, ಶಾದೂಲ್ ಠಾಕೂರ್, ಪೃಥ್ವಿ ಶಾ ಮೊದಲಾದವರೆಲ್ಲ ಈ ಶಿಬಿರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿಬಿರಕ್ಕೆ ಆಯ್ಕೆಯಾಗಿರುವ ಮುಂಬಯಿ ತಂಡದ ಉಳಿದ ಪ್ರಮುಖ ಆಟಗಾರರೆಂದರೆ ಆದಿತ್ಯ ತಾರೆ, ಧವಳ್ ಕುಲಕರ್ಣಿ, ಸೂರ್ಯ ಕುಮಾರ್ ಯಾದವ್, ಅಖೀಲ್ ಹೆರ್ವಾಡ್ಕರ್, ಸಿದ್ದೇಶ್ ಲಾಡ್, ಕರ್ಶ್ ಕೊಠಾರಿ ಮೊದಲಾದವರು.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444