ಕೊನೆಗೂ ಬೆಂಗಳೂರಿಗೆ ಗೆಲುವು


Team Udayavani, May 15, 2017, 2:56 PM IST

RCB-15-5.jpg

ಹೊಸದಿಲ್ಲಿ: ಐಪಿಎಲ್‌ ಹತ್ತರ ಅಂತಿಮ ಲೀಗ್‌ ಪಂದ್ಯದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ ತಂಡವನ್ನು 10 ರನ್ನಿನಿಂದ ಸೋಲಿಸಿದ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡವು ಗೆಲುವಿನೊಂದಿಗೆ ತನ್ನ ಅಭಿಯಾನ ಅಂತ್ಯಗೊಳಿಸಿದೆ. ಗೇಲ್‌ ಮತ್ತು ಕೊಹ್ಲಿ ಅವರ ಉತ್ತಮ ಆಟ ದಿಂದಾಗಿ ಆರ್‌ಸಿಬಿ 6 ವಿಕೆಟಿಗೆ 161 ರನ್‌ ಗಳಿಸಿದ್ದರೆ ಡೆಲ್ಲಿ ತಂಡವು ಸರಿಯಾಗಿ 20 ಓವರ್‌ಗಳಲ್ಲಿ 151 ರನ್ನಿಗೆ ಆಲೌಟಾಗಿ ಶರಣಾಯಿತು. ಕರುಣ್‌ ನಾಯರ್‌, ಶ್ರೇಯಸ್‌ ಅಯ್ಯರ್‌, ರಿಷಬ್‌ ಪಂತ್ ಮತ್ತು ಶಮಿ ಎರಡಂಕೆಯ ಮೊತ್ತ ಗಳಿಸಿದರು. ಹರ್ಷಲ್‌ ಪಟೇಲ್‌ ಮತ್ತು ಪವನ್‌ ನೇಗಿ ತಲಾ ಮೂರು ವಿಕೆಟ್‌ ಕಿತ್ತರು. ಈ ಪಂದ್ಯದ ಮೂಲಕ ಐಪಿಎಲ್‌ಗೆ ಪಾದಾರ್ಪಣೆಗೈದ ಹರ್ಷಲ್‌ ಪಟೇಲ್‌ ಪಂದ್ಯಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತಗೊಂಡರು. 

ಈ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ನಡೆಸಿದ ಆರ್‌ಸಿಬಿ ವಿಷ್ಣು ವಿನೋದ್‌ ಅವರನ್ನು ಬೇಗನೇ ಕಳೆದುಕೊಂಡಿತು. ಆದರೆ ಗೇಲ್‌ ಮತ್ತು ಕೊಹ್ಲಿ ಅವರ ಉಪಯುಕ್ತ ಆಟದಿಂದಾಗಿ ತಂಡ ಚೇತರಿಸಿಕೊಂಡಿತು. ದ್ವಿತೀಯ ವಿಕೆಟಿಗೆ ಅವರಿಬ್ಬರು 66 ರನ್‌ ಪೇರಿಸಿದರು. ಈ ಜೋಡಿ ಮುರಿದ ಬಳಿಕ ಆರ್‌ಸಿಬಿ ಕುಸಿಯಿತು. ಗೇಲ್‌ 38 ಎಸೆತಗಳಲ್ಲಿ 48 ರನ್‌ ಹೊಡೆದರು. 3 ಬೌಂಡರಿ ಮತ್ತು 3 ಸಿಕ್ಸರ್‌ ಬಾರಿಸಿದರು. ಕೊಹ್ಲಿ 45 ಎಸೆತ ಎದುರಿಸಿದ್ದು 58 ರನ್‌ ಹೊಡೆದರು. ಅವರು ಸಹ ಮೂರು ಬೌಂಡರಿ ಮತ್ತು 3 ಸಿಕ್ಸರ್‌ ಹೊಡೆದರು. ಇವರಿಬ್ಬರು ಹೊರತುಪಡಿಸಿ ತಂಡದ ಉಳಿದ ಯಾವುದೇ ಆಟಗಾರ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಲು ವಿಫ‌ಲರಾದರು. ಬಿಗು ದಾಳಿ ಸಂಘಟಿಸಿದ ಪ್ಯಾಟ್‌ ಕಮಿನ್ಸ್‌ ತನ್ನ 4 ಓವರ್‌ಗಳ ದಾಳಿಯಲ್ಲಿ ಕೇವಲ 21 ರನ್‌ ನೀಡಿ 2 ವಿಕೆಟ್‌ ಉರುಳಿಸಿದರು.


ಸ್ಕೋರ್‌ ಪಟ್ಟಿ
ರಾಯಲ್‌ ಚಾಲೆಂಜರ್ಸ್ ಬೆಂಗಳೂರು

ಕ್ರಿಸ್‌ ಗೇಲ್‌    ಸಿ ಜಹೀರ್‌ ಬಿ ನದೀಮ್‌    48
ವಿಷ್ಣು ವಿನೋದ್‌    ಬಿ ಕಮಿನ್ಸ್‌    3
ವಿರಾಟ್‌ ಕೊಹ್ಲಿ    ಸಿ ನದೀಮ್‌ ಬಿ ಜಹೀರ್‌    58
ಟ್ರ್ಯಾವಿಸ್‌ ಹೆಡ್‌    ರನೌಟ್‌    2
ಕೇದಾರ್‌ ಜಾಧವ್‌    ರನೌಟ್‌    12
ಸಚಿನ್‌ ಬೇಬಿ    ಸಿ ಆ್ಯಂಡರ್ಸನ್‌ ಬಿ ಕಮಿನ್ಸ್‌    12
ಶೇನ್‌ ವಾಟ್ಸನ್‌    ಔಟಾಗದೆ    4
ಪವನ್‌ ನೇಗಿ    ಔಟಾಗದೆ    13

ಇತರ:        9
ಒಟ್ಟು (20 ಓವರ್‌ಗಳಲ್ಲಿ 6 ವಿಕೆಟಿಗೆ)    161

ವಿಕೆಟ್‌ ಪತನ: 1-30, 2-96, 3-102, 4-118, 5-131, 6-144

ಬೌಲಿಂಗ್‌:
ಜಹೀರ್‌ ಖಾನ್‌ 4-0-31-1
ಮೊಹಮ್ಮದ್‌ ಶಮಿ 4-0-31-0
ಪ್ಯಾಟ್‌ ಕಮಿನ್ಸ್‌ 4-0-21-2
ಅಮಿತ್‌ ಮಿಶ್ರಾ 2-0-26-0
ಕೋರಿ ಆ್ಯಂಡರ್ಸನ್‌ 4-0-38-0
ಶಾದಾಬ್‌ ನದೀಮ್‌2-0-12-1

ಡೆಲ್ಲಿ ಡೇರ್‌ಡೆವಿಲ್ಸ್‌
ಸಂಜು ಸ್ಯಾಮ್ಸನ್‌    ಸಿ ಕೊಹ್ಲಿ ಬಿ ಆವೇಶ್‌    0
ಕರುಣ್‌ ನಾಯರ್‌    ಸಿ ಜಾಧವ್‌ ಬಿ ವಾಟ್ಸನ್‌    26
ಶ್ರೇಯಸ್‌ ಅಯ್ಯರ್‌    ಸಿ ವಾಟ್ಸನ್‌ ಬಿ ಹರ್ಷಲ್‌    32
ರಿಷಬ್‌ ಪಂತ್‌    ಬಿ ಹರ್ಷಲ್‌    45
ಎಂ. ಸಾಮ್ಯುಯೆಲ್ಸ್‌    ಬಿ ಹರ್ಷಲ್‌    0
ಕೋರಿ ಆ್ಯಂಡರ್ಸನ್‌    ಸ್ಟಂಪ್ಡ್ ವಿಷ್ಣು ಬಿ ಹೆಡ್‌    3
ಪ್ಯಾಟ್‌ ಕಮಿನ್ಸ್‌    ಸಿ ಕೊಹ್ಲಿ ಬಿ ಹೆಡ್‌    7
ಅಮಿತ್‌ ಮಿಶ್ರಾ    ಬಿ ನೇಗಿ    7
ಮೊಹಮ್ಮದ್‌ ಶಮಿ    ಸ್ಟಂಪ್ಡ್ ವಿಷ್ಣು ಬಿ ನೇಗಿ    21
ಶಾದಾಬ್‌ ನದೀಮ್‌    ಸಿ ಜಾಧವ್‌ ಬಿ ನೇಗಿ    2
ಜಹೀರ್‌ ಖಾನ್‌    ಔಟಾಗದೆ    1

ಇತರ:        7
ಒಟ್ಟು  (20 ಓವರ್‌ಗಳಲ್ಲಿ ಆಲೌಟ್‌)    151

ವಿಕೆಟ್‌ ಪತನ: 1-0, 2-41, 3-87, 4-87, 5-105, 6-113, 7-119, 8-135, 9-150

ಬೌಲಿಂಗ್‌:
ಆವೇಶ್‌ ಖಾನ್‌,     4-0-23-1
ಯಜ್ವೇಂದ್ರ ಚಾಹಲ್‌3-0-24-0
ಹರ್ಷಲ್‌ ಪಟೇಲ್‌    4-0-43-3
ಶೇನ್‌ ವಾಟ್ಸನ್‌    4-0-16-1
ಟ್ರ್ಯಾವಿಸ್‌ ಹೆಡ್‌    3-0-30-2
ಪವನ್‌ ನೇಗಿ    2-0-10-3

ಪಂದ್ಯಶ್ರೇಷ್ಠ: ಹರ್ಷಲ್‌ ಪಟೇಲ್‌

ಟಾಪ್ ನ್ಯೂಸ್

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

CM ಯೋಗಿ ಆದೇಶದ ಬೆನ್ನಲ್ಲೇ 17,000 ಧಾರ್ಮಿಕ ಕೇಂದ್ರಗಳ ಲೌಡ್ ಸ್ಪೀಕರ್ ಶಬ್ದದ ಪ್ರಮಾಣ ಇಳಿಕೆ

ಹಿಜಾಬ್‌ ವಿವಾದ ಹಿಂದೆ ಕಾಂಗ್ರೆಸ್‌: ಸಿಎಂ ಬಸವರಾಜ ಬೊಮ್ಮಾಯಿ

ವಿಟ್ಲ : ಭಾರೀ ಮಳೆಯಿಂದ ಕೃತಕ ನೆರೆ : ವಿಟ್ಲ- ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆ

ವಿಟ್ಲ : ಭಾರೀ ಮಳೆಗೆ ವಿಟ್ಲ- ಮಂಗಳೂರು ರಸ್ತೆ ಸಂಪೂರ್ಣ ಮುಳುಗಡೆ, ಜನರ ಆಕ್ರೋಶ

1-sadad

ಉನ್ನತ ಪೊಲೀಸ್ ಅಧಿಕಾರಿಗಳ ವರ್ಗಾವಣೆ: ಕೊನೆಗೂ ಕಮಲ್ ಪಂತ್ ಎತ್ತಂಗಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಐಪಿಎಲ್‌ ಟೈ ಮ್ಯಾಚ್‌-07: ಗುಜರಾತ್‌ ಲಯನ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮೇಲುಗೈ

ಐಪಿಎಲ್‌ ಟೈ ಮ್ಯಾಚ್‌-07: ಗುಜರಾತ್‌ ಲಯನ್ಸ್‌ ವಿರುದ್ಧ ಮುಂಬೈ ಇಂಡಿಯನ್ಸ್‌ ಮೇಲುಗೈ

Mithali Raj and Jhulan Goswami rested from Women’s T20 Challenge

ಮಹಿಳಾ ಟಿ20 ಚಾಲೆಂಜ್: ಮಿಥಾಲಿ ರಾಜ್-ಜೂಲನ್ ಗೋಸ್ವಾಮಿಗೆ ಇಲ್ಲ ಜಾಗ

ಐಪಿಎಲ್‌ 2022: ಡೆಲ್ಲಿ ಕ್ಯಾಪಿಟಲ್ಸ್‌-ಪಂಜಾಬ್‌ ಕಿಂಗ್ಸ್‌: ಮಸ್ಟ್‌ ವಿನ್‌ ಗೇಮ್‌

ಐಪಿಎಲ್‌ 2022: ಡೆಲ್ಲಿ ಕ್ಯಾಪಿಟಲ್ಸ್‌-ಪಂಜಾಬ್‌ ಕಿಂಗ್ಸ್‌: ಮಸ್ಟ್‌ ವಿನ್‌ ಗೇಮ್‌

ಐಪಿಎಲ್‌ 2022: ರಾಜಸ್ಥಾನ್‌ ರಾಯಲ್ಸ್‌ ಗೆ 24 ರನ್‌ ಗೆಲುವು

ಲಕ್ನೋ ಸೂಪರ್‌ಜೈಂಟ್ಸ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ ಗೆ 24 ರನ್‌ ಗೆಲುವು

ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ

ಪ್ರಧಾನಿ ಮೋದಿ ನಿವಾಸಕ್ಕೆ ಆಟಗಾರರಿಗೆ ಆಹ್ವಾನ

MUST WATCH

udayavani youtube

ಫಲಜ್ಯೋತಿಷ್ಯದಲ್ಲಿ ದೀರ್ಘಕಾಲೀನ ಫಲಾದೇಶ ಮಾಡುವುದು ಹೇಗೆ ?

udayavani youtube

ಥಾಮಸ್ ಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಬಾಡ್ಮಿಂಟನ್ ತಾರೆಯರು

udayavani youtube

ಅಮೃತಕಾಲದಲ್ಲಿ ದೇಶ ವಿಶ್ವಗುರು – ನಿರ್ಮಲಾ ಸೀತಾರಾಮನ್‌

udayavani youtube

ದೇಶದಲ್ಲಿ ಭ್ರಷ್ಟಾಚಾರ ಬಿತ್ತಿದ್ದು, ಬೆಳೆಸಿದ್ದು ಕಾಂಗ್ರೆಸ್ ಪಕ್ಷ : ಸಿ.ಟಿ.ರವಿ

udayavani youtube

ಪಿಲಿ ಬತ್ತ್ಂಡ್‌ ಪಿಲಿ… ಬಲಿಪುಲೇ… ಕಾಪುವಿನಲ್ಲಿ ದ್ವೈ ವಾರ್ಷಿಕ ಪಿಲಿಕೋಲ…

ಹೊಸ ಸೇರ್ಪಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಪದವಿ ಕಾಲೇಜು ಅತಿಥಿ ಉಪನ್ಯಾಸಕರ ವೇತನ 24 ಕೋಟಿ ರೂ. ಬಿಡುಗಡೆ

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಕೆಪಿಟಿಸಿಎಲ್‌ ಎಇ ಭಡ್ತಿ: ತಾತ್ಕಾಲಿಕ ತಡೆ ನೀಡಿದ ಹೈಕೋರ್ಟ್‌

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

ಚಾರ್‌ಧಾಮ್‌ ಯಾತ್ರೆ: 39 ಮಂದಿ ಯಾತ್ರಿಗಳ ಸಾವು

1-sdsd

ಪ್ರಪಂಚದಲ್ಲೆ ತಂತ್ರಜ್ಞಾನ ರೂಪಿಸುವಲ್ಲಿ ಭಾರತ ಪ್ರಥಮ ಸ್ಥಾನದಲ್ಲಿದೆ: ಡಾ.ಜಿ.ಪರಮೇಶ್ವರ್

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

ಅಸ್ವಸ್ಥ ತಾಯಿಯ ಆಸ್ತಿ ಮಾರಲು ಹೊರಟಿದ್ದ ಮಗನಿಗೆ ಸುಪ್ರೀಂ ತರಾಟೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.