ಪ್ರೊ ಇಂಡಿಯಾ ಮಾಯ್‌ಥಾಯ್‌ ಸ್ಪರ್ಧೆಗೆ ಚಾಲನೆ

Team Udayavani, Nov 21, 2019, 12:47 AM IST

ಮಂಗಳೂರು: ರಾಜ್ಯದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನ.24ರ ವರೆಗೆ ಆಯೋಜಿಸಲಾದ ಪ್ರೊ ಇಂಡಿಯಾ ಮಾಯ್‌ಥಾಯ್‌ ಚಾಂಪಿಯನ್‌ಶಿಪ್‌ ಪಂದ್ಯಾಟ ಬುಧವಾರ ಉದ್ಘಾಟನೆಗೊಂಡಿತು.

ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಅವರು ಪಂದ್ಯಾಟ ಉದ್ಘಾಟಿಸಿ ಮಾತನಾಡಿ, ಕರಾವಳಿ ಭಾಗಕ್ಕೆ ಬಹು ಅಪರೂಪವಾದ ಮಾಯ್‌ಥಾಯ್‌ ಕ್ರೀಡಾಕೂಟವನ್ನು ಮೊದಲ ಬಾರಿಗೆ ವಿನೂತನವಾಗಿ ಆಯೋಜಿಸಿರುವುದು ಶ್ಲಾಘನೀಯ ಎಂದರು.

ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಮಂಗಳೂರು ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌., ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಉದ್ಯಮಿ ಕೆ.ಸಿ. ನಾೖಕ್‌, ಪ್ರಮುಖರಾದ ಸುರೇಶ್ಚಂದ್ರ ಶೆಟ್ಟಿ, ಕರುಣಾಕರ ಶೆಟ್ಟಿ, ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಜಗದೀಶ್‌ ಅಧಿಕಾರಿ, ಸುನೀಲ್‌ ಆಚಾರ್‌, ರೂಪೇಶ್‌ ಶೆಟ್ಟಿ, ಚಂದ್ರಹಾಸ್‌ ಶೆಟ್ಟಿ, ರಾಘವೇಂದ್ರ ರಾವ್‌, ಸ್ವರ್ಣಸುಂದರ್‌, ಬಶೀರ್‌ ಬೈಕಂಪಾಡಿ, ಯತೀಶ್‌ ಬೈಕಂಪಾಡಿ, ಸಚಿನ್‌ ರಾಜ್‌ ರೈ, ಬಿಪಿನ್‌ ರಾಜ್‌, ನಿತೀಶ್‌ ಕುಮಾರ್‌, ಮಹೇಶ್‌ ಪಾಂಡ್ಯ, ಡಿ.ಎಂ. ಅಸ್ಲಾಂ, ಚೇತನ್‌, ಬಾಲಕೃಷ್ಣ ಶೆಟ್ಟಿ, ಚೇತನ್‌ ಅಶ್ವಥಾಮ ಉಪಸ್ಥಿತರಿದ್ದರು. ಶಾಸಕ ಹಾಗೂ ಕಾರ್ಯಕ್ರಮ ಸಂಘಟಕ ವೇದವ್ಯಾಸ ಕಾಮತ್‌ ಸ್ವಾಗತಿ ಸಿದರು. ಮಾಯ್‌ಥಾಯ್‌ ಅಸೋಸಿಯೇಶನ್‌ ರಾಜ್ಯಾಧ್ಯಕ್ಷ ರಾಜ್‌ ಗೋಪಾಲ್‌ ರೈ ಪ್ರಸ್ತಾವಿಸಿದರು.

ದೇಶದ 27 ರಾಜ್ಯಗಳ ಸುಮಾರು 450ಕ್ಕೂ ಅಧಿಕ ಕ್ರೀಡಾಪಟುಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ