ಮಹಿಳಾ ಕ್ರಿಕೆಟ್ ಕೋಚ್ ಆಯ್ಕೆ ಸಚಿನ್, ಗಂಗೂಲಿಗೆ ಕೆಲಸವೇ ಇಲ್ಲ!
Team Udayavani, Aug 12, 2018, 6:15 AM IST
ಮುಂಬಯಿ: ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ತರಬೇತುದಾರರ ಆಯ್ಕೆ ಸಂದರ್ಶನ ಶುಕ್ರವಾರ ನಡೆದಿದೆ. ಆದರೆ ಈ ಮಹತ್ವದ ಸಂದರ್ಶನಲ್ಲಿ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ, ವಿವಿಎಸ್ ಲಕ್ಷ್ಮಣ್ ನೇತೃತ್ವದ ಉನ್ನತ ಸಲಹಾ ಸಮಿತಿಗೆ ಯಾವುದೇ ಪಾತ್ರವಿರಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಈ ಮೂವರ ಕೆಲಸವೇ ತರಬೇತುದಾರರ ಆಯ್ಕೆ. ಆದರೂ ಮಹಿಳಾ ತರಬೇತುದಾರರ ಆಯ್ಕೆ ವೇಳೆ ಅವರ ಪಾತ್ರ ಶೂನ್ಯ ಎಂದು ಆಂಗ್ಲ ಪತ್ರಿಕಾ ಮೂಲಗಳು ಹೇಳಿವೆ.
2016ರಲ್ಲಿ ಭಾರತದ ಪುರುಷರ ತಂಡದ ತರಬೇತುದಾರ ಅನಿಲ್ ಕುಂಬ್ಳೆಯನ್ನು ಇದೇ ಗುಂಪು ಆಯ್ಕೆ ಮಾಡಿತ್ತು. 2017ರಲ್ಲಿ ರವಿಶಾಸ್ತ್ರಿಯನ್ನೂ ಆಯ್ಕೆ ಮಾಡಿದ್ದು ಇವರೇ. ಆದರೆ ಕಳೆದ ವರ್ಷ ತುಷಾರ್ ಅರೋಥೆಯನ್ನು ಮಹಿಳಾ ತಂಡಕ್ಕೆ ತರಬೇತುದಾರರನ್ನಾಗಿ ಆಯ್ಕೆ ಮಾಡುವಲ್ಲಾಗಲೀ, ಅವರು ಆ ಸ್ಥಾನದಿಂದ ಹೊರಹೋಗುವಲ್ಲಾಗಲೀ ಈ ಮೂವರಿಗೆ ಯಾವುದೇ ಮಾಹಿತಿಯಿರಲಿಲ್ಲ. ಮಹಿಳಾ ತಂಡದ ಆಯ್ಕೆಯಲ್ಲಿ ಇವರ ಪಾತ್ರವಿಲ್ಲವೇ ಎಂಬ ಪ್ರಶ್ನೆಗೂ ಇದುವರೆಗೆ ಉತ್ತರ ಸಿಕ್ಕಿಲ್ಲ.
ಆದರೆ ಕ್ರಿಕೆಟ್ ಅದ್ಭುತ ಜ್ಞಾನ ಹೊಂದಿರುವ ಈ ಮೂವರನ್ನು ಸರಿಯಾಗಿ ಬಳಸಬೇಕಾಗಿರುವುದು ಬಿಸಿಸಿಐ ಕರ್ತವ್ಯ. ಅದರಲ್ಲಿ ಅದು ಎಡವಿದೆ ಎನ್ನಲಾಗಿದೆ. ಅಲ್ಲದೇ ಮೂವರು ಸದ್ಯ ತಮ್ಮ ಸಲಹಾ ಹುದ್ದೆಯಲ್ಲಿ ಸಕ್ರಿಯರಾಗಿಲ್ಲ ಎಂದೂ ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ