ಟಾಮಿ ಬೇಮಂಟ್‌ ಇಲೆವೆನ್‌ನಲ್ಲಿ ಸಚಿನ್‌ ತೆಂಡುಲ್ಕರ್‌ಗೆ ಜಾಗವಿಲ್ಲ!

Team Udayavani, Mar 3, 2018, 6:05 AM IST

ಲಂಡನ್‌: ಇಂಗ್ಲೆಂಡಿನ ಕ್ರಿಕೆಟ್‌ ಆಟಗಾರ್ತಿ ಟಾಮಿ ಬೇಮಂಟ್‌ ಪುರುಷರ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್‌ ಕ್ರಿಕೆಟ್‌ ತಂಡವೊಂದನ್ನು ಪ್ರಕಟಿಸಿದ್ದು, ಇದರಲ್ಲಿ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸ್ಥಾನ ಸಂಪಾದಿಸಿಲ್ಲ! ಅಷ್ಟೇ ಅಲ್ಲ, ಶೇನ್‌ ವಾರ್ನ್, ರಾಹುಲ್‌ ದ್ರಾವಿಡ್‌, ಸುನೀಲ್‌ ಗಾವಸ್ಕರ್‌, ರಿಕಿ ಪಾಂಟಿಂಗ್‌ ಮೊದಲಾದ ಮಹಾನ್‌ ಕ್ರಿಕೆಟಿಗರೂ ಸ್ಥಾನ ಪಡೆಯುವಲ್ಲಿ ವಿಫ‌ಲರಾಗಿದ್ದಾರೆ.

ಇವರ ಬದಲು ಜಸ್ಟಿನ್‌ ಲ್ಯಾಂಗರ್‌, ಡ್ಯಾರನ್‌ ಗೌ ಮೊದಲಾದ ಸಾಮಾನ್ಯ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದನ್ನು ಗಮನಿಸಿದಾಗ ಟಾಮಿ ಬೇಮಂಟ್‌ ಅವರ ಕ್ರಿಕೆಟ್‌ ಜ್ಞಾನದ ಬಗ್ಗೆ ಸಂಶಯ ಮೂಡುತ್ತದೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೇಮಂಟ್‌ ಇಲೆವೆನ್‌ನಲ್ಲಿರುವ ಗತಕಾಲದ ಪ್ರಮುಖ ಕ್ರಿಕೆಟಿಗನೆಂದರೆ ಗ್ಯಾರಿ ಸೋಬರ್ ಮಾತ್ರ. ಅವರು ಈ ತಂಡದ ನಾಯಕರಾಗಿದ್ದಾರೆ.

26ರ ಹರೆಯದ ಟಾಮಿ ಬೇಮಂಟ್‌ ಕಳೆದ ವರ್ಷದ ವನಿತಾ ಏಕದಿನ ವಿಶ್ವಕಪ್‌ ಪಂದ್ಯಾವಳಿಯ ಸರಣಿಶ್ರೇಷ್ಠ ಆಟಗಾರ್ತಿಯಾಗಿ ಮೂಡಿಬಂದಿದ್ದರು. ಕೂಟದಲ್ಲೇ ಸರ್ವಾಧಿಕ 410 ರನ್‌ ಬಾರಿಸಿ ಸರಣಿಶ್ರೇಷ್ಠ ಗೌರವಕ್ಕೆ ಪಾತ್ರರಾಗಿದ್ದರು. ಭಾರತದೆದುರಿನ ಫೈನಲ್‌ ಪಂದ್ಯವನ್ನು ಗೆದ್ದ ಇಂಗ್ಲೆಂಡ್‌ ಚಾಂಪಿಯನ್‌ ಆಗಿ ಮೂಡಿಬಂದಿತ್ತು.

ಬೇಮಂಟ್‌ ಟೆಸ್ಟ್‌ ಇಲೆವೆನ್‌: ಅಲಸ್ಟೇರ್‌ ಕುಕ್‌, ಜಸ್ಟಿನ್‌ ಲ್ಯಾಂಗರ್‌, ಬ್ರಿಯಾನ್‌ ಲಾರಾ, ಕುಮಾರ ಸಂಗಕ್ಕರ, ಜಾಕ್‌ ಕ್ಯಾಲಿಸ್‌, ಸರ್‌ ಗ್ಯಾರಿ ಸೋಬರ್ (ನಾಯಕ), ಆ್ಯಡಂ ಗಿಲ್‌ಕ್ರಿಸ್ಟ್‌ (ವಿ.ಕೀ.), ಡ್ಯಾರನ್‌ ಗೌ, ವಾಸಿಮ್‌ ಅಕ್ರಂ, ಜೇಮ್ಸ್‌ ಆ್ಯಂಡರ್ಸನ್‌, ಮುತ್ತಯ್ಯ ಮುರಳೀಧರನ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ