ಸಚಿನ್‌ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಲಾರಾ

Team Udayavani, Oct 20, 2018, 9:07 AM IST

ಮುಂಬಯಿ: ಪ್ರಸ್ತುತ ಭಾರತ – ವೆಸ್ಟ್‌ ಇಂಡೀಸ್‌ ನಡುವೆ ಟೆಸ್ಟ್‌ ಸರಣಿ ಮುಗಿದು ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಈ ವೇಳೆ ವಿಶ್ವದ ಮಹಾನ್‌ ಕ್ರಿಕೆಟ್‌ ದಿಗ್ಗಜರಿಬ್ಬರು ಭೇಟಿಯಾಗಿ ಸಂತಸ ಹಂಚಿಕೊಂಡಿದ್ದಾರೆ. ಕ್ರಿಕೆಟ್‌ ದಂತಕಥೆಗಳಾದ ಸಚಿನ್‌ ತೆಂಡುಲ್ಕರ್‌ ಮತ್ತು ಬ್ರ್ಯಾನ್‌ ಲಾರಾ ಅವರು ಹಲವು ವರ್ಷಗಳ ಬಳಿಕ  ಭೇಟಿಯಾಗಿದ್ದಾರೆ. 

ಲಾರಾ ಅವರದ್ದು  “ಸಪ್ರೈಸ್‌ ವಿಸಿಟ್‌’ ಎಂದು ಸಚಿನ್‌ ತೆಂಡುಲ್ಕರ್‌ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಸಹಿತ ಪ್ರಕಟಿಸಿದ್ದಾರೆ. ಒಂದು ಕಾಲದಲ್ಲಿ ಇವರಿಬ್ಬರು ಕ್ರಿಕೆಟ್‌ ಲೋಕವನ್ನು ಅಕ್ಷರಶಃ ಆಳಿದ ಮಹಾನ್‌ ಸಾಧಕರಾಗಿದ್ದರು. ಅವರಿಬ್ಬರು ನೀಲಿ ಬಣ್ಣದ ಟೀ ಶರ್ಟ್‌ ಮತ್ತು ಕ್ಯಾಪ್‌ ಧರಿಸಿರುವುದು ವಿಶೇಷವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ