ಗುರು ಅಚ್ರೇಕರ್ ಪಾರ್ಥೀವ ಶರೀರಕ್ಕೆ ಹೆಗಲುಕೊಟ್ಟ ಸಚಿನ್‌

Team Udayavani, Jan 4, 2019, 12:30 AM IST

ಮುಂಬೈ: ಕ್ರಿಕೆಟ್‌ ದೇವರಿಗೆ ಪಾಠ ಹೇಳಿಕೊಟ್ಟ ಗುರು ರಮಾಕಾಂತ್‌ ವಿಟuಲ್‌ ಅಚ್ರೇಕರ್ ಅಂತಿಮ ಸಂಸ್ಕಾರ ಕಾರ್ಯ ಮುಂಬೈನಲ್ಲಿ ಗುರುವಾರ ನಡೆಯಿತು. 

ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಸೇರಿದಂತೆ ಹಲವಾರು ಮಾಜಿ, ಹಾಲಿ ಕ್ರಿಕೆಟಿಗರು ಪಾಲ್ಗೊಂಡು ಅಗಲಿದ ದಿವ್ಯಾತ್ಮಕ ಚಿರಶಾಂತಿಯನ್ನು ಕೋರಿದರು. ಅಂತಿಮ ಸಂಸ್ಕಾರಕ್ಕೆ ಶವವನ್ನು ತೆಗೆದುಕೊಂಡು ಹೋಗುವ ವೇಳೆ ಪಾರ್ಥೀವ ಶರೀರಕ್ಕೆ ಸಚಿನ್‌ ತೆಂಡುಲ್ಕರ್‌ ಕೂಡ ಹೆಗಲು ಕೊಡುವ ಮೂಲಕ ಗುರುವಿನ ಮೇಲಿನ ಪ್ರೀತಿಯನ್ನು ಮೆರೆದರು. ವಯೋಸಹಜ ಕಾರಣಗಳಿಂದ ಅಚ್ರೇಕರ್ ಬುಧವಾರ ನಿಧನರಾಗಿದ್ದರು. ಸಚಿನ್‌ ತೆಂಡುಲ್ಕರ್‌, ವಿನೋದ್‌ ಕಾಂಬ್ಳಿ, ಪ್ರವೀಣ್‌ ಆಮ್ರೆ, ಸಮೀರ್‌ ದಿಘೆ, ಬಲ್ವಿಂದರ್‌ ಸಿಂಗ್‌ ಸಂಧು ಸೇರಿದಂತೆ ಹಲವಾರು ಕ್ರಿಕೆಟಿಗರನ್ನು ದೇಶಕ್ಕೆ ಪರಿಚಯಿಸಿದ ಹೆಗ್ಗಳಿಕೆಯನ್ನು ಪಡೆದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ