ಅಭಿಮಾನಿ ಜತೆ ಬಿಎಂಡಬ್ಲ್ಯು ಎಂ2 ಕಾರು ಚಲಾಯಿಸಿದ ಸಚಿನ್‌!

Team Udayavani, Feb 21, 2019, 12:30 AM IST

ಹೊಸದಿಲ್ಲಿ: ಭಾರತ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಕಾರು ಪ್ರಿಯ. ಇತ್ತೀಚೆಗೆ ಅವರು ಹೊಸದಾಗಿ ಲಾಂಚ್‌ ಆಗಿರುವ ಬಿಎಂಡಬ್ಲ್ಯು ಎಂ2 ಕಾರನ್ನು ಚಲಾಯಿಸಿ ಸುದ್ದಿಯಾಗಿದ್ದಾರೆ. ವಿಶೇಷವೆಂದರೆ, ಅವರು ಅಭಿಮಾನಿಯೊಬ್ಬರನ್ನು ಕೂರಿಸಿಕೊಂಡು ಈ ಕಾರನ್ನು ಚಲಾಯಿಸಿದ್ದು!

ಹೊಸದಿಲ್ಲಿಯ ಬುದ್ಧ್ ಅಂತಾರಾಷ್ಟ್ರೀಯ ಫಾರ್ಮುಲ 1 ರೇಸ್‌ ಟ್ರ್ಯಾಕ್‌ನಲ್ಲಿ ಅಭಿಮಾನಿ ಪ್ರಣವ್‌ ಪನ್‌ಪಾಲಿಯ ಅವರನ್ನು ಜತೆಯಲ್ಲಿ ಕೂರಿಸಿಕೊಂಡು ಸಚಿನ್‌ ಕಾರು ಚಲಾಯಿಸಿದರು. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹಲವು ವರ್ಷಗಳಿಂದ ಬಿಎಂಡಬ್ಲ್ಯು ಸಂಸ್ಥೆ ಜತೆ ಸಚಿನ್‌ ತೆಂಡುಲ್ಕರ್‌ ಒಪ್ಪಂದ ಮಾಡಿಕೊಂಡಿದ್ದು, ಹಲವು ಬಿಎಂಡಬ್ಲ್ಯು ಕಾರುಗಳನ್ನೂ ಹೊಂದಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ