ಆಸೀಸ್‌ ಕ್ರಿಕೆಟ್‌ ಮಂಡಳಿ ವಿರುದ್ಧ ತೆಂಡುಲ್ಕರ್‌ ಅಭಿಮಾನಿಗಳು ಗರಂ

Team Udayavani, Apr 25, 2018, 6:00 AM IST

ಹೊಸದಿಲ್ಲಿ: ಕ್ರಿಕೆಟ್‌ ದೇವರೆಂದು ಕರೆಸಿಕೊಂಡಿರುವ ಸಚಿನ್‌ ತೆಂಡುಲ್ಕರ್‌ ಅಭಿಮಾನಿಗಳು ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ವಿರುದ್ಧ ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣವೂ ಬಹಳ ಸ್ವಾರಸ್ಯಕರ. 

ಬುಧವಾರ ಸಚಿನ್‌ ತೆಂಡುಲ್ಕರ್‌ 45ನೇ ಹುಟ್ಟುಹಬ್ಬ. ಜಗತ್ತಿನಲ್ಲಿರುವ ಸಚಿನ್‌ ಅಭಿಮಾನಿಗಳೆಲ್ಲ ಅಭಿನಂದನೆಯ ಮಹಾಪೂರವನ್ನೇ ಹರಿಸಿದ್ದಾರೆ. ಅಂತಹ ಸಂತಸದಲ್ಲಿರಬೇಕಾದರೆ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ತನ್ನ ಮಾಜಿ ವೇಗದ ಬೌಲರ್‌ ಡೇಮಿನ್‌ ಫ್ಲೆಮಿಂಗ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ. ಅವರೂ ಬುಧವಾರವೇ ಹುಟ್ಟುಹಬ್ಬದ ಸಂತಸದಲ್ಲಿದ್ದಾರೆ. ಇದಕ್ಕೂ ಸಚಿನ್‌ ಅಭಿಮಾನಿಗಳು ಸಿಟ್ಟಾಗುವುದಕ್ಕೂ ಕಾರಣವೇನೆಂದು ಕೇಳುತ್ತೀರಾ? ಮುಂದೆ ಓದಿ…

ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ತನ್ನ ಟ್ವೀಟರ್‌ ಖಾತೆಯಲ್ಲಿ ಫ್ಲೆಮಿಂಗ್‌ಗೆ ಶುಭಾಶಯ ಕೋರಿದ್ದು ಅದರಲ್ಲಿ ಒಂದು ವಿಡಿಯೋ ಕೂಡ ಪ್ರಕಟಿಸಿದೆ. ಆ ವಿಡಿಯೋದಲ್ಲಿ ಸಚಿನ್‌ರನ್ನು ಫ್ಲೆಮಿಂಗ್‌ ಔಟ್‌ ಮಾಡುತ್ತಿರುವ ದೃಶ್ಯಾವಳಿಯಿದೆ. ಇದು ಸಚಿನ್‌ ಅಭಿಮಾನಿಗಳು ಸಿಟ್ಟಾಗಲು ಕಾರಣ. ಸಚಿನ್‌ ಹುಟ್ಟುಹಬ್ಬದ ದಿನವೇ ಔಟಾಗುತ್ತಿರುವ ಈ ವಿಡಿಯೋ ಪ್ರಕಟಿಸಿ ಆಸ್ಟ್ರೇಲಿಯ ಅವಮಾನಿಸಿದೆ ಎಂದು ಅಭಿಮಾನಿಗಳು ಶಂಕಿಸಿದ್ದಾರೆ!

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ