ಸಚಿನ್‌ ಸಾಧಿಸಿರುವ ಮೈಲುಗಲ್ಲು ಮುಟ್ಟಲಾಗದು: ವಿರಾಟ್‌ ಕೊಹ್ಲಿ

Team Udayavani, Jan 17, 2017, 3:44 PM IST

ನವದೆಹಲಿ: ಭಾರತ ತಂಡದ ನಾಯಕ ಕೊಹ್ಲಿ ಸ್ಥಿರ ಬ್ಯಾಟಿಂಗ್‌ ಪ್ರದರ್ಶನ ನೋಡಿದವರು ಈತ ಸಚಿನ್‌ ತೆಂಡುಲ್ಕರ್‌ ದಾಖಲೆ ಮುರಿಯಬಹುದು ಅಂದುಕೊಳ್ಳುತ್ತಾರೆ. ಆದರೆ ಸ್ವತಃ ಕೊಹ್ಲಿಯೇ ಸಚಿನ್‌ ಸಾಧಿಸಿರುವ ಮೈಲುಗಲ್ಲು ಮುಟ್ಟಲಾಗದು ಎಂದು ಹೇಳಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಭಾರತ ತಂಡದ ನಾಯಕ ಕೊಹ್ಲಿ, “ನನ್ನ ಹತ್ತಿರ 24 ವರ್ಷಗಳ ಕಾಲ ದೀರ್ಘಾವಧಿ ಆಡಲು ಸಾಧ್ಯವಾಗದು. ಸಚಿನ್‌ 200 ಟೆಸ್ಟ್‌, 100 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ. ಇವು ಕಲ್ಪಿಸಿಕೊಳ್ಳಲಾಗದ ಅಂಕಿಅಂಶಗಳಾಗಿವೆ. ಇದೊಂದು ಅದ್ಭುತ ಸಾಧನೆ. ನನ್ನಿಂದ ಸಚಿನ್‌ ಸಾಧಿಸಿರುವ ಮೈಲುಗಲ್ಲು ಮುಟ್ಟಲಾಗದು ಎಂದು ಕೊಹ್ಲಿ ಹೇಳಿದ್ದಾರೆ.

ಭಾನುವಾರ ನಡೆದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಶತಕ ಸಿಡಿಸಿದ್ದಾರೆ. ಇದು ಚೇಸಿಂಗ್‌ನಲ್ಲಿ ವಿರಾಟ್‌ ಕೊಹ್ಲಿ ಸಿಡಿಸಿದ 17ನೇ ಶತಕವಾಗಿದೆ. ಈ ಮೂಲಕ ಚೇಸಿಂಗ್‌ನಲ್ಲಿ ಸಚಿನ್‌ ಬಾರಿಸಿದ ಶತಕದ ದಾಖಲೆಯನ್ನು ಸರಿಗಟ್ಟಿದ್ದಾರೆ. ಸಚಿನ್‌ 232ನೇ ಪಂದ್ಯದಲ್ಲಿ ಈ ಸಾಧನೆ ಮಾಡಿದರೆ, ಕೊಹ್ಲಿ 122ನೇ ಪಂದ್ಯದಲ್ಲಿಯೇ ಈ ಸಾಧನೆ ಮಾಡಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ