ಸೈನಾ ವಿವಾಹ ಶುಭ ಹಾರೈಸುವ ವೇಳೆ ಸಚಿನ್‌ ಎಡವಟ್ಟು

Team Udayavani, Dec 16, 2018, 6:50 AM IST

ಮುಂಬೈ: ಭಾರತದ ಪ್ರಖ್ಯಾತ ಬ್ಯಾಡ್ಮಿಂಟನ್‌ ತಾರೆಯರಾದ ಸೈನಾ ನೆಹ್ವಾಲ್‌ ಹಾಗೂ ಪಾರುಪಳ್ಳಿ ಕಶ್ಯಪ್‌, ಶುಕ್ರವಾರ ಕಾನೂನುಬದ್ಧವಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. 

ಸಾಂಪ್ರದಾಯಿಕವಾಗಿ ಇಬ್ಬರ ವಿವಾಹ ಭಾನುವಾರ ಹೈದರಾಬಾದ್‌ನಲ್ಲಿ ನಡೆಯಲಿದೆ. ಈ ವೇಳೆ ನೂತನ ದಂಪತಿಗೆ ಶುಭ ಹಾರೈಸಿದ ಕ್ರಿಕೆಟ್‌ ದೇವರು ಸಚಿನ್‌ ತೆಂಡುಲ್ಕರ್‌, ಎಡವಟ್ಟೊಂದನ್ನು ಮಾಡಿದ್ದಾರೆ. ಟ್ವೀಟರ್‌ನಲ್ಲಿ ಸೈನಾ-ಕಶ್ಯಪ್‌ ಚಿತ್ರದ ಬದಲು ಸೈನಾ-ಶ್ರೀಕಾಂತ್‌ ಚಿತ್ರ ಪ್ರಕಟಿಸಿ ಮುಜುಗರಕ್ಕೀಡಾಗಿದ್ದಾರೆ. ವಿಷಯ ಗೊತ್ತಾಗುತ್ತಿದ್ದಂತೆ ಸಚಿನ್‌ ಚಿತ್ರವನ್ನು ಅಳಿಸಿದ್ದಾರೆ. ತಮಾಷೆಯೆಂದರೆ ಇದೇ ಚಿತ್ರವನ್ನು ಅಷ್ಟರಲ್ಲಾಗಲೇ ಕೆ.ಶ್ರೀಕಾಂತ್‌ ತಮ್ಮ ಟ್ವೀಟ್‌ ಖಾತೆಯಲ್ಲಿ ಹಂಚಿಕೊಂಡಾಗಿತ್ತು. ಆದ್ದರಿಂದ ಈ ತಪ್ಪು ಇನ್ನಷ್ಟು ಜನರಿಗೆ ತಲುಪಿದೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ