ಸೈನಾ, ಶ್ರೀಕಾಂತ್ ಒಲಿಂಪಿಕ್ಸ್ ಕನಸು ಭಗ್ನ?
Team Udayavani, May 7, 2021, 6:11 AM IST
ಹೊಸದಿಲ್ಲಿ: ಲಂಡನ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತು ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ ಕೆ. ಶ್ರೀಕಾಂತ್ ಅವರ ಟೋಕಿಯೊ ಒಲಿಂಪಿಕ್ಸ್ ಕನಸು ಭಗ್ನವಾಗುವುದೇ? ಇಂಥದೊಂದು ಅನುಮಾನ ಕಾಡಿದೆ. ವಾಯುಯಾನ ನಿರ್ಬಂಧದಿಂದಾಗಿ ಕೊನೆಯ ಅರ್ಹತಾ ಪಂದ್ಯಾವಳಿಯಾದ ಮಲೇಶ್ಯ ಓಪನ್ ಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿರುವುದೇ ಇದಕ್ಕೆ ಕಾರಣ.
ಇಂಡಿಯಾ ಓಪನ್ ಟೂರ್ನಿ (ಮೇ 11-16) ಮುಂದೂಡಲ್ಪಟ್ಟ ಬಳಿಕ ಸೈನಾ ಮತ್ತು ಶ್ರೀಕಾಂತ್ ಮಲೇಶ್ಯ ಓಪನ್ ಮೇಲೆ ಭರವಸೆ ಇರಿಸಿಕೊಂಡಿದ್ದರು (ಮೇ 25-30). ಆದರೆ ಮಲೇಶ್ಯ ಮತ್ತು ಸಿಂಗಾಪುರ ಭಾರತದ ವಿಮಾನಗಳಿಗೆ ನಿಷೇಧ ಹೇರಿವೆ.
ಬ್ಯಾಡ್ಮಿಂಟನ್ ತಂಡದ ಆಗಮನಕ್ಕಾಗಿ ಈ ನಿರ್ಬಂಧ ವನ್ನು ಸಡಿಲುಗೊಳಿಸುವಂತೆ ಮಲೇಶ್ಯ ಸರಕಾರವನ್ನು ಭಾರತ ಕೇಳಿಕೊಂಡಿದೆ. ಇದಕ್ಕೆ ಮಲೇಶ್ಯ ಸಕಾರಾತ್ಮಕವಾಗಿ ಸ್ಪಂದಿಸೀತೇ ಎಂಬುದನ್ನು ಕಾದು ನೋಡಬೇಕು.
ಬಿಲ್ಗಾರರಿಗೆ ಸ್ವಿಸ್ ವೀಸಾ ಇಲ್ಲ :
ಭಾರತದ ಬಿಲ್ಗಾರರಿಗೆ ಸ್ಟೇಜ್ 2 ವರ್ಲ್ಡ್ಕಪ್ ಆರ್ಚರಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ತಪ್ಪಿದೆ. ಸ್ವಿಸ್ ವೀಸಾವನ್ನು ನಿರಾಕರಿಸಿದ್ದೇ ಇದಕ್ಕೆ ಕಾರಣ.
ಮೇ 17ರಿಂದ 23ರ ತನಕ ಸ್ವಿಜರ್‌ಲ್ಯಾಂಡಿನ ಲುಸಾನ್ನೆಯಲ್ಲಿ ನಡೆಯುವ ಈ ಕೂಟದಲ್ಲಿ ಭಾರತ ಕೂಡ ಪಾಲ್ಗೊಳ್ಳಬೇಕಿತ್ತು. ಆದರೆ ಕೋವಿಡ್ ಹಿನ್ನೆಲೆಯಲ್ಲಿ ಭಾರತೀಯರಿಗೆ ಸ್ವಿಸ್ ರಾಯಭಾರ ಕಚೇರಿ ವೀಸಾ ನಿರಾಕರಿಸಿದೆ ಎಂಬುದಾಗಿ ಆರ್ಚರಿ ಅಸೋಸಿಯೇಸನ್ ಕಾರ್ಯದರ್ಶಿ ಪ್ರಮೋದ್ ಚಂದುರ್ಕಾರ್ ಹೇಳಿದ್ದಾರೆ.
ಭಾರತೀಯರಿನ್ನು ನೇರವಾಗಿ ಸ್ಟೇಜ್ 3 ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಿದೆ. ಇದು ಜೂ. 23ರಂದು ಪ್ಯಾರಿಸ್‌ನಲ್ಲಿ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಾವು ಪ್ರವಾಸ ಆರಂಭಿಸಿದರೆ ಕಾಂಗ್ರೆಸ್ ಗೆ ಬಿಜೆಪಿ ಶಕ್ತಿ ಅರಿವಾಗಲಿದೆ: ಯಡಿಯೂರಪ್ಪ
ಪುತ್ರಿ ಹುಟ್ಟುಹಬ್ಬಕ್ಕೆ ಶಾಲಾ ಕೊಠಡಿ ನಿರ್ಮಿಸಿ ಮಾದರಿ
ಉಡುಪಿ: ಚಿತ್ತರಂಜನ್ ಸರ್ಕಲ್ “ಚಾರ್ಲಿ” ಸಾವು; ಅಂತಿಮ ಗೌರವದೊಂದಿಗೆ ಅಂತ್ಯಸಂಸ್ಕಾರ
ಟೀಸರ್ ನಲ್ಲಿ ಶಿವ 143 ಮಿಂಚು: ಧೀರೇನ್ ರಾಮ್ ಕುಮಾರ್ ರಗಡ್ ಎಂಟ್ರಿ
ಕುಟುಂಬ ರಕ್ಷಣೆಗೆ ಮತ್ತೆ ಬಂದ್ರು ಚಾರ್ಜ್ ಕುಟ್ಟಿ? : ʼದೃಶ್ಯಂ-3ʼ ಪೋಸ್ಟರ್ ವೈರಲ್