ಏಷ್ಯಾ ತಂಡ ಬ್ಯಾಡ್ಮಿಂಟನ್ ಕೂಟಕ್ಕೆ ಸೈನಾ, ಸಿಂಧು ಗೈರು
Team Udayavani, Feb 1, 2020, 8:53 AM IST
ನವದೆಹಲಿ: ಮನೀಲದಲ್ಲಿ ನಡೆಯಲಿರುವ ಏಷ್ಯಾ ತಂಡ ಚಾಂಪಿಯನ್ ಶಿಪ್ನಲ್ಲಿ ಪಾಲ್ಗೊಳ್ಳದಿರಲು ಖ್ಯಾತ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್, ಪಿ.ವಿ.ಸಿಂಧು ನಿರ್ಧರಿಸಿದ್ದಾರೆ.
ಟೋಕೊಯೋ ಒಲಿಂಪಿಕ್ಸ್ ಕೂಟವನ್ನು ಗಮನ ದಲ್ಲಿಟ್ಟುಕೊಂಡು ಅದರತ್ತ ಸಂಪೂರ್ಣ ಲಕ್ಷ್ಯವಹಿಸುವ ನಿಟ್ಟಿನಲ್ಲಿ ಕೂಟದಿಂದ ಹಿಂದೆ ಸರಿಯಲು ತೀರ್ಮಾನ ತೆಗೆದುಕೊಂಡಿದ್ದಾರೆ.
ದಿಗ್ಗಜರ ಅನುಪಸ್ಥಿತಿಯಲ್ಲಿ ಏಷ್ಯಾ ತಂಡ ಚಾಂಪಿಯನ್ಶಿಪ್ಗೆ ಒಟ್ಟು 17 ಮಂದಿ ಸದಸ್ಯರ ಭಾರತ ತಂಡ ಪ್ರಕಟಿಸಲಾಗಿದೆ. ವಿಶೇಷವೆಂದರೆ ತಂಡದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಶ್ವಿನಿ ಭಟ್, ಬೆಂಗಳೂರಿನ ಶಿಖಾ ಗೌತಮ್ ಸ್ಥಾನ ಪಡೆದುಕೊಂಡಿದ್ದಾರೆ.
ಕೂಟದಲ್ಲಿ ಭಾರತ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿರುವ ಇತರ ತಂಡಗಳೆಂದರೆ ಹಾಲಿ ಚಾಂಪಿಯನ್ ಇಂಡೋನೇಷ್ಯಾ, ಆತಿಥೇಯ ಫಿಲಿಪ್ಪೀನ್ಸ್.
ಪುರುಷರ ತಂಡ: ಎಂ. ಆರ್.ಅರ್ಜುನ್ ಮುನ್ನಡೆಸಲಿದ್ದಾರೆ. ಶುಭಂಕರ್ ಡೇ, ಧ್ರುವ್ ಕಪಿಲ, ಕೆ.ಶ್ರೀಕಾಂತ್, ಎಚ್.ಎಸ್.ಪ್ರಣಯ್, ಸಾತ್ವಿಕ್ಸಾಯಿರಾಜ್, ಬಿ.ಸಾಯಿ ಪ್ರಣೀತ್, ಲಕ್ಷ್ಯಸೇನ್ ಮತ್ತು ಚಿರಾಗ್ ಶೆಟ್ಟಿ.
ಮಹಿಳಾ ತಂಡ: ಮಾಳವಿಕಾ ಬಾನಸೋದ್, ಅಶ್ವಿನಿ ಭಟ್, ಅಶ್ಮಿತಾ ಚಾಲಿಹ, ಶಿಖಾ ಗೌತಮ್, ಆಕರ್ಶಿ ಕಶ್ಯಪ್, ಕೆ.ಮನೀಷಾ, ರುತುಪರ್ಣಾ, ಗಾಯತ್ರಿ ಗೋಪಿಚಂದ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ