ಐಪಿಎಲ್ ಬಿಡ್ಡಿಂಗ್’ನಿಂದ ಹೊರ ನಡೆದ ಇಂಗ್ಲೆಂಡ್‌ನ ಸ್ಯಾಮ್ ಬಿಲ್ಲಿಂಗ್ಸ್

Team Udayavani, Dec 14, 2019, 2:15 PM IST

ಕೋಲ್ಕತ್ತಾ: ವರ್ಣರಂಜಿತ ಕ್ರಿಕೆಟ್ ಕೂಟ ಇಂಡಿಯನ್ ಪ್ರೀಮಿಯರ್ ಲೀಗ್ ನ ಹರಾಜಿಗೆ ಇನ್ನೇನು ಒಂದು ವಾರವಷ್ಟೇ ಬಾಕಿ ಉಳಿದಿದೆ. ಹೀಗಿರುವಾಗ ಇಂಗ್ಲೆಂಡ್ ನ ಬ್ಯಾಟ್ಸಮನ್ ಸ್ಯಾಮ್ ಬಿಲ್ಲಿಂಗ್ಸ್ ಈ ವರ್ಷದ ಐಪಿಎಲ್ ಹರಾಜಿನಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ.

ಇಂಗ್ಲೆಂಡ್ ನ ದೇಶಿಯ ಕೂಟ ಕೌಂಟಿ ಕ್ರಿಕೆಟ್ ನಲ್ಲಿ ಆಡುವತ್ತ ಸ್ಯಾಮ್ ಬಿಲ್ಲಿಂಗ್ಸ್ ಗಮನ ಹರಿಸುತ್ತಿದ್ದು, ಐಪಿಎಲ್ ಆಡದೇ ಇರಲು ಯೋಚಿಸಿದ್ದಾರೆ. ಕೇವಲ ಐಪಿಎಲ್ ಮಾತ್ರವಲ್ಲದೆ ಯಾವುದೇ ಫ್ರಾಂಚೈಸಿ ಕ್ರಿಕೆಟ್ ನಲ್ಲಿ ಆಡದೇ ಇರಲು ಸ್ಯಾಮ್ ಬಿಲ್ಲಿಂಗ್ಸ್ ನಿರ್ಧರಿಸಿದ್ದಾರೆ.

2016ರಲ್ಲಿ ಡೆಲ್ಲಿ ಪರ ಆಡಿದ್ದ ಸ್ಯಾಮ್ ನಂತರ 2018 ಮತ್ತು 2019ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದ್ದರು.  ಈ ವರ್ಷದ ಬಿಡ್ಡಿಂಗ್ ಗೆ ಸಿಎಸ್ ಕೆ ಸ್ಯಾಮ್ ರನ್ನು ಬಿಡುಗಡೆಗೊಳಿಸಿತ್ತು.

ಇದೇ ತಿಂಗಳ 19ರಂದು ಐಪಿಎಲ್ ಹರಾಜು ನಡೆಯಲಿದ್ದು, ಕೋಲ್ಕತ್ತಾದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂತಿಮವಾಗಿ 332 ಮಂದಿ ಹರಾಜು ಕಣದಲ್ಲಿದ್ದು, 72 ಸ್ಥಾನಗಳಿಗೆ ಬಿಡ್ಡಿಂಗ್ ನಡೆಯಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ