ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಹಮೀದ್, ಬಿಲ್ಲಿಂಗ್ಸ್
Team Udayavani, May 27, 2021, 8:10 AM IST
ಲಂಡನ್: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ 2 ಪಂದ್ಯಗಳ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್ ತಂಡವನ್ನು ಆರಿಸಲಾಗಿದೆ. ನಿರೀಕ್ಷೆಯಂತೆ ಐಪಿಎಲ್ನಲ್ಲಿ ಪಾಲ್ಗೊಂಡ ಎಲ್ಲ ಆಟಗಾರರನ್ನೂ ದೂರ ಇರಿಸಲಾಗಿದೆ.
ವಿಕೆಟ್ ಕೀಪರ್ ಸ್ಯಾಮ್ ಬಿಲ್ಲಿಂಗ್ಸ್ ಮತ್ತು ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಹಸೀಬ್ ಹಮೀದ್ ಅವರಿಗೆ ಅವಕಾಶ ನೀಡಲಾಗಿದೆ.
ಕೀಪರ್ ಬೆನ್ ಫೋಕ್ಸ್ ಸ್ನಾಯು ಸೆಳೆತಕ್ಕೆ ಸಿಲುಕಿದ್ದರಿಂದ ಹೊರಗುಳಿದರು. ಆಲ್ರೌಂಡರ್ ಬೆನ್ ಸ್ಟೋಕ್ಸ್ ಕೂಡ ಗಾಯಾಳುಗಳ ಯಾದಿಯಲ್ಲಿದ್ದಾರೆ.
ಇದನ್ನೂ ಓದಿ:ಟೋಕಿಯೊ ಒಲಿಂಪಿಕ್ಸ್ ರದ್ದುಗೊಳಿಸಿ : ಮಾಧ್ಯಮದಿಂದಲೇ ಮನವಿ
ಐಪಿಎಲ್ನಲ್ಲಿ ಆಡಿದ ಮೊಯಿನ್ ಅಲಿ, ಜಾನಿ ಬೇರ್ಸ್ಟೊ, ಜಾಸ್ ಬಟ್ಲರ್, ಸ್ಯಾಮ್ ಕರನ್, ಕ್ರಿಸ್ ವೋಕ್ಸ್ ಅವರನ್ನೆಲ್ಲ ಕೈಬಿಡಲಾಗಿದೆ.