ಗೇಲ್ ಜತೆ ಸ್ಯಾಮ್ ಕರನ್: ಅಂದು-ಇಂದು!
Team Udayavani, Apr 6, 2019, 6:00 AM IST
ಚೆನ್ನೈ: ಬದುಕು ಬದಲಾಗುವುದಕ್ಕೆ ಬಹಳ ಕಾಲ ಬೇಕಿಲ್ಲ. ಅದರ ಸಣ್ಣ ಹೊಡೆತಗಳಿಗೆ ದೊಡ್ಡ ಬದಲಾವಣೆಗಳೇ ನಡೆದುಬಿಡಬಹುದು. ಕೆಲವು ವರ್ಷಗಳ ಹಿಂದೆ ಬಾಲಕನಂತೆ, ವೆಸ್ಟ್ ಇಂಡೀಸ್ನ ಕ್ರಿಕೆಟ್ ದಿಗ್ಗಜ ಕ್ರಿಸ್ ಗೇಲ್ ಜತೆ ಚಿತ್ರ ತೆಗೆಸಿಕೊಂಡಿದ್ದ ಇಂಗ್ಲೆಂಡ್ನ ಆಲ್ರೌಂಡರ್ ಸ್ಯಾಮ್ ಕರನ್ ಈಗ ಯಾರೂ ಊಹಿಸದ ಸ್ಥಾನದಲ್ಲಿ ನಿಂತಿದ್ದಾರೆ.
ಬರೀ 20 ವರ್ಷದ ಸ್ಯಾಮ್ ಕರನ್ ಅವರೀಗ ಐಪಿಎಲ್ನ ಆಕರ್ಷಣೆ. ಎ. ಒಂದರಂದು ಡೆಲ್ಲಿ ವಿರುದ್ಧ ನಡೆದ ಪಂದ್ಯದಲ್ಲಿ ಪಂಜಾಬನ್ನು ಸೋಲಿನಿಂದ ಪಾರು ಮಾಡಿ ಗೆಲುವಿನ ಪೀಠದ ಮೇಲೆ ಕೂರಿಸಿದ ಸಾಹಸಿ. ಕೊನೆಯ ಹಂತದಲ್ಲಿ ಅವರು ಹ್ಯಾಟ್ರಿಕ್ ಸೇರಿ, 4 ವಿಕೆಟ್ ಗಳಿಸಿದ್ದರಿಂದ ಇನ್ನೇನು ಗೆದ್ದೇ ಬಿಟ್ಟಿತು ಎಂಬ ಸ್ಥಿತಿಯಲ್ಲಿದ್ದ ಡೆಲ್ಲಿ ಸೋತು ಹೋಯಿತು. ಕರನ್, ಐಪಿಎಲ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಅತಿ ಕಿರಿಯ ಕ್ರಿಕೆಟಿಗ. ಅಂದು ಬಾಲಕನಾಗಿದ್ದಾಗ ಗೇಲ್ ಜೊತೆಗೆ ಚಿತ್ರ ತೆಗೆಸಿಕೊಂಡಿದ್ದ ಅವರು, ಈಗ ಪಂಜಾಬ್ ತಂಡದಲ್ಲಿ ಗೇಲ್ ಸಂಗಡಿಗ. ಈಗಲೂ ಅವರು ಗೇಲ್ ಜತೆ ಚಿತ್ರ ತೆಗೆಸಿಕೊಂಡಿದ್ದಾರೆ. ಇದನ್ನು ಗೇಲ್ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Editorial: ಗುಕೇಶ್ ಗೆಲುವು- ಭಾರತದ ಯುವಶಕ್ತಿಯ ಸಂಕೇತ
AMU: ಇತಿಹಾಸದಲ್ಲೇ ಮೊದಲು… ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮಹಿಳಾ ಉಪಕುಲಪತಿ ನೇಮಕ
Bengaluru: ಕದಂಬ ಹೋಟೆಲ್ ಸ್ಫೋಟ ಮಾಡುವುದಾಗಿ ಬೆದರಿಕೆ
Mandya LokSabha Constituency:ಸಕ್ಕರೆ ನಾಡಿನ ಪಾರುಪತ್ಯಕ್ಕೆ ಸಾಂಪ್ರದಾಯಿಕ ಜಿದ್ದಾಜಿದ್ದಿ
Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್ಐಎ ವಶಕ್ಕೆ