ಸಾನಿಯಾ, ಬೋಪಣ್ಣ ಜೋಡಿ ಮುನ್ನಡೆ
Team Udayavani, Aug 19, 2017, 12:12 PM IST
ಸಿನ್ಸಿನಾಟಿ: ಸಿನ್ಸಿನಾಟಿ ಟೆನಿಸ್ ಪಂದ್ಯಾವಳಿಯಲ್ಲಿ ಭಾರತದ ಸಾನಿಯಾ ಮಿರ್ಜಾ ಮತ್ತು ರೋಹನ್ ಬೋಪಣ್ಣ ಗೆಲುವಿನ ಓಟ ಮುಂದುವರಿಸಿದ್ದಾರೆ. ವನಿತಾ ಡಬಲ್ಸ್ನಲ್ಲಿ ಸಾನಿಯಾ ಜೋಡಿ ಸೆಮಿಫೈನಲಿಗೆ ಲಗ್ಗೆ ಇರಿಸಿದರೆ, ಪುರುಷರ ಡಬಲ್ಸ್ನಲ್ಲಿ ಬೋಪಣ್ಣ ಜೋಡಿ ಕ್ವಾರ್ಟರ್ ಫೈನಲ್ ತಲುಪಿದೆ.
ಗುರುವಾರ ರಾತ್ರಿ ನಡೆದ ವನಿತಾ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿತ್ತು. ಸಾನಿಯಾ ಮಿರ್ಜಾ ಹಾಗೂ ಚೀನದ ಪೆಂಗ್ ಶುಯಿ ಸೇರಿಕೊಂಡು ರೊಮೇನಿಯಾದ ಶ್ರೇಯಾಂಕ ರಹಿತ ಐರಿನಾ ಕ್ಯಾಮೆಲಿಯಾ ಬೆಗು-ರಲುಕಾ ಒಲಾರು ವಿರುದ್ಧ ದಿಟ್ಟ ಹೋರಾಟ ನಡೆಸಿದರು. ಇಂಡೋ- ಚೈನೀಸ್ ಜೋಡಿಗೆ ಮೊದಲ ಸೆಟ್ ಸುಲಭದಲ್ಲೇ ಒಲಿಯಿ ತಾದರೂ ಉಳಿದೆರಡು ಸೆಟ್ಗಳಲ್ಲಿ ರೊಮೇನಿಯನ್ ಆಟಗಾರ್ತಿ ಯರು ತಿರುಗಿ ಬಿದ್ದರು. ಅಂತಿಮವಾಗಿ ಸಾನಿಯಾ- ಶುಯಿ 6-3, 6-7 (1), 10-3 ಅಂತರದಿಂದ ಗೆಲುವು ಕಂಡರು.
ಬೋಪಣ್ಣ ಜೋಡಿಯ ಹೋರಾಟ
ಪುರುಷರ ಡಬಲ್ಸ್ನ ಸ್ಪರ್ಧೆಯಲ್ಲಿ ಬೋಪಣ್ಣ-ಇವಾನ್ ಡೊಡಿಗ್ ಭಾರೀ ಹೋರಾಟವೊಂದನ್ನು ಸಂಘಟಿಸಿ ಜುವಾನ್ ಕಬಾಲ್ (ಕೊಲಂಬಿಯಾ)-ಫೊಗಿನಿ (ಇಟಲಿ) ವಿರುದ್ಧ 5-7, 7-5, 10-8 ಅಂತರದಿಂದ ಗೆದ್ದು ಬಂದರು.