ಸೆಮಿಫೈನಲ್ಗೆ ಸಾನಿಯಾ-ಶುಯಿ ಪೆಂಗ್
Team Udayavani, Sep 9, 2017, 7:55 AM IST
ನ್ಯೂಯಾರ್ಕ್: ಭಾರತದ ಸಾನಿಯಾ ಮಿರ್ಜಾ-ಚೀನದ ಶುಯಿ ಪೆಂಗ್ ಜೋಡಿ ಯುಎಸ್ ಓಪನ್ ವನಿತಾ ಡಬಲ್ಸ್ ಸೆಮಿಫೈನಲ್ ತಲುಪಿದೆ. 4ನೇ ಶ್ರೆಯಾಂಕದ ಇಂಡೋ-ಚೈನಾ ಜೋಡಿ ಸೇರಿಕೊಂಡು 5ನೇ ಶ್ರೇಯಾಂಕದ ಟೈಮಿಯಾ ಬಬೋಸ್ (ಹಂಗೇರಿ)-ಆಂಡ್ರಿಯಾ ಲವಕೋವಾ (ಜೆಕ್ ಗಣರಾಜ್ಯ) ಅವರನ್ನು 7-6 (7-5), 6-4 ನೇರ ಸೆಟ್ಗಳಿಂದ ಮಣಿಸಿತು. ತೀವ್ರ ಪೈಪೋಟಿಯ ಈ ಪಂದ್ಯ ಒಂದು ಗಂಟೆ, 56 ನಿಮಿಷಗಳ ತನಕ ಸಾಗಿತು.
ಸಾನಿಯಾ-ಪೆಂಗ್ ಇನ್ನು ದ್ವಿತೀಯ ಶ್ರೇಯಾಂಕದ ಮಾರ್ಟಿನಾ ಹಿಂಗಿಸ್ (ಸಿಟ್ಸರ್ಲ್ಯಾಂಡ್)-ಯುಂಗ್ ಜಾನ್ ಚಾನ್ (ಚೈನೀಸ್ ತೈಪೆ) ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಡಬಲ್ಸ್ನಲ್ಲಿ ಇವರು ಹಾವೊ ಚಿಂಗ್ ಚಾನ್ (ಚೈನೀಸ್ ತೈಪೆ)-ಶುಯಿ ಜಾಂಗ್ (ಚೀನ) ವಿರುದ್ಧ 6-2, 6-2 ಅಂತರದ ಸುಲಭ ಜಯ ಸಾಧಿಸಿದರು.
ಇದು ಈ ವರ್ಷದ ಗ್ರ್ಯಾನ್ಸ್ಲಾಮ್ ಕೂಟದಲ್ಲಿ ಸಾನಿಯಾ ಮಿರ್ಜಾ ಅವರ ಅತ್ಯುತ್ತಮ ಸಾಧನೆಯಾಗಿದೆ. ಹಿಂದಿನ ಮೂರೂ ಗ್ರ್ಯಾನ್ಸ್ಲಾಮ್ಗಳಲ್ಲಿ ಅವರು ಬೇರೆ ಬೇರೆ ಆಟಗಾರ್ತಿಯರ ಜತೆ ಕಣಕ್ಕಿಳಿದಿದ್ದರು. ಆಸ್ಟ್ರೇಲಿಯನ್ ಓಪನ್ನಲ್ಲಿ ಬಾಬೊìರಾ ಸ್ಟ್ರೈಕೋವಾ, ಫ್ರೆಂಚ್ ಓಪನ್ನಲ್ಲಿ ಯರೋಸ್ಲಾವಾ ಶ್ವೆಡೋವಾ, ವಿಂಬಲ್ಡನ್ನಲ್ಲಿ ಕಿರ್ಸ್ಟನ್ ಫ್ಲಿಪ್ಕೆನ್ಸ್ ಜತೆ ಆಡಲಿಳಿದ್ದಿರು. ಕ್ರಮವಾಗಿ 3ನೇ, ಮೊದಲ ಹಾಗೂ 3ನೇ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು
LSG vs CSK: ಲಕ್ನೋದಲ್ಲೂ ಚೆನ್ನೈ ಫೇವರಿಟ್
IPL; ರೋಚಕ ಪಂದ್ಯದಲ್ಲಿ ಪಂಜಾಬ್ ಎದುರು 9 ರನ್ ಜಯ ಸಾಧಿಸಿದ ಮುಂಬೈ
Austria Marathon: ಭಾರತವನ್ನು ಪ್ರತಿನಿಧಿಸಲಿರುವ ಕೊಡಗಿನ ಅಪ್ಪಚಂಗಡ ಬೆಳ್ಯಪ್ಪ