ಫೆಡ್ ಕಪ್ಗೆ ಮರಳಿದ ಸಾನಿಯಾ ಮಿರ್ಜಾ
Team Udayavani, Dec 25, 2019, 11:32 PM IST
ಹೊಸದಿಲ್ಲಿ: ಡಬಲ್ಸ್ ತಾರೆ ಸಾನಿಯಾ ಮಿರ್ಜಾ ಅವರು ನಾಲ್ಕು ವರ್ಷಗಳ ಬಳಿಕ ಭಾರತೀಯ ಫೆಡ್ ಕಪ್ ತಂಡಕ್ಕೆ ಮರಳಿದ್ದಾರೆ. ಫೆಡ್ ಕಪ್ ತಂಡ ವನ್ನು ಪ್ರಕಟಿಸಲಾಗಿದ್ದು ಸಾನಿಯಾ ಅವರಲ್ಲದೇ ಅಗ್ರ ಕ್ರಮಾಂಕದ ಸಿಂಗಲ್ಸ್ ಆಟಗಾರ್ತಿ ಅಂಕಿತಾ ರೈನಾ ಕೂಡ ಇದ್ದಾರೆ.
ಸಾನಿಯಾ ಈ ಹಿಂದೆ 2016ರಲ್ಲಿ ಫೆಡ್ ಕಪ್ ಕೂಟದಲ್ಲಿ ಆಡಿದ್ದರು. 2017ರ ಅಕ್ಟೋಬರ್ ಬಳಿಕ ಕುಟುಂಬದ ಜತೆ ಹೆಚ್ಚಿನ ಸಮಯ ಇರಲು ಟೆನಿಸ್ನಿಂದ ದೂರ ಉಳಿದಿದ್ದರು.
ರಿಯಾ ಭಾಟಿಯಾ, ರುತುಜಾ ಬೋಸ್ಲೆ ಮತ್ತು ಕರ್ಮಾನ್ ಕೌರ್ ಥಂಡಿ ತಂಡದಲ್ಲಿರುವ ಉಳಿದ ಮೂವರು ಆಟಗಾರ್ತಿಯರಾಗಿದ್ದಾರೆ. ಡಬ್ಲ್ಯುಟಿಎ ಸಿಂಗಲ್ಸ್ ರ್ಯಾಂಕಿಂಗ್ ಪಟ್ಟಿಯಲ್ಲಿ 180ನೇ ಸ್ಥಾನದಲ್ಲಿರುವ ಅಂಕಿತಾ ತಂಡದಲ್ಲಿರುವ ಗರಿಷ್ಠ ರ್ಯಾಂಕಿನ ಆಟಗಾರ್ತಿ ಆಗಿದ್ದಾರೆ.
ಮಾಜಿ ಡೇವಿಸ್ ಕಪ್ ಆಟಗಾರ ವಿಶಾಲ್ ಉಪ್ಪಲ್ ತಂಡದ ನಾಯಕ ಮತ್ತು ಅಂಕಿತಾ ಭಾಂಬ್ರಿ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಸೌಜನ್ಯಾ ಬವಿಸೆಟ್ಟಿ ಮೀಸಲು ಆಟಗಾರ್ತಿಯಾಗಿ ತಂಡದ ಜತೆ ಇರಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ