ಅಜರ್‌ ಪುತ್ರನಿಗೂ, ಸಾನಿಯಾ ಸಹೋದರಿಗೂ ಮದುವೆ

Team Udayavani, Oct 9, 2019, 5:17 AM IST

ಹೈದರಾಬಾದ್‌: ಋಣಾನುಬಂಧ ರೂಪೇಣ ಪಶುಪತ್ನಿ ಸುತಾಲಯ ಎನ್ನುವ ಮಾತು ಭಾರತೀಯ ಧರ್ಮಶಾಸ್ತ್ರದಲ್ಲಿ ಬಹಳ ಜನಪ್ರಿಯ. ಎಲ್ಲಿಂದ ಎಲ್ಲಿಗೆ ಬೇಕಾದರೂ ನಂಟು ಬೆಳೆಯಬಹುದು, ಅವೆಲ್ಲ ಋಣಾನುಬಂಧ ಎನ್ನುವುದು ಮೇಲಿನ ಮಾತಿನ ತಾತ್ಪರ್ಯ. ಅದನ್ನು ಸಮರ್ಥಿಸುವ ಘಟನೆಯೊಂದು ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಈಗ ನಡೆದಿದೆ.

ಕಳೆದ ಒಂದು ವರ್ಷದಿಂದ ಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಸಹೋದರಿ ಅನಮ್‌ ಮಿರ್ಜಾ ಹಾಗೂ ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಪುತ್ರ ಅಸದುದ್ದೀನ್‌ ನಡುವೆ ಏನೋ ನಡೆಯುತ್ತಿದೆ ಎಂಬ ಗುಸುಗುಸು ಕೇಳಿಬಂದಿತ್ತು. ಇಬ್ಬರೂ ಮದುವೆಯಾಗುತ್ತಾರೆಂದು ಆಗಲೇ ವದಂತಿಗಳು ಹಬ್ಬಿದ್ದವು. ಆಗ ಈ ಬಗ್ಗೆ ಯಾರೂ ಯಾವುದೇ ಮಾತನಾಡಿರಲಿಲ್ಲ. ಈಗ ಸ್ವತಃ ಸಾನಿಯಾ ಮಿರ್ಜಾ ಈ ವಿಚಾರವನ್ನು ಹೌದು ಎಂದು ಖಚಿತಪಡಿಸಿದ್ದಾರೆ. ಈ ಇಬ್ಬರೂ ಡಿಸೆಂಬರ್‌ನಲ್ಲಿ ವಿವಾಹವಾಗಲಿದ್ದಾರೆ.

ಮೊಹಮ್ಮದ್‌ ಅಜರುದ್ದೀನ್‌ ಭಾರತೀಯ ಕ್ರಿಕೆಟ್‌ನಲ್ಲಿ ಉತ್ತುಂಗದಲ್ಲಿದ್ದಾಗ, ಸಾನಿಯಾ ಮಿರ್ಜಾ ಹೆಸರು ಯಾರಿಗೂ ಗೊತ್ತಿರಲಿಲ್ಲ. ಈಗ ಸಾನಿಯಾ ಮಿರ್ಜಾ ಉತ್ತುಂಗದಲ್ಲಿದ್ದಾರೆ. ಫಿಕ್ಸಿಂಗ್‌ ಆರೋಪದ ಕಾರಣ ಮೊಹಮ್ಮದ್‌ ಅಜರುದ್ದೀನ್‌ ಕಳೆಗುಂದಿದ್ದಾರೆ. ಈಗ ಅವರ ಪುತ್ರ ಸಾನಿಯಾ ಸಹೋದರಿ ಕೈಹಿಡಿಯುತ್ತಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ