ಫೈನಲ್‌ ತಲುಪಿದ ಸಾನಿಯಾ-ನಾದಿಯಾ

Team Udayavani, Jan 17, 2020, 10:46 PM IST

ಹೋಬರ್ಟ್‌: “ಹೋಬರ್ಟ್‌ ಇಂಟರ್‌ನ್ಯಾಶನಲ್‌ ಟೆನಿಸ್‌ ಟೂರ್ನಿ’ಯ ವನಿತಾ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ-ನಾದಿಯಾ ಕಿಚೆನಾಕ್‌ ಜೋಡಿ ಫೈನಲ್‌ಗೆ ಲಗ್ಗೆ ಇರಿಸಿದೆ.

ಶುಕ್ರವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಸಾನಿಯಾ-ನಾದಿಯಾ ಸೇರಿಕೊಂಡು ಸ್ಲೊವೇನಿಯಾದ ಟಮಾರಾ ಜಿದಾನ್ಸೆಕ್‌-ಜೆಕ್‌ ಗಣರಾಜ್ಯದ ಮೇರಿ ಬೌಜ್ಕೋವಾ ಜೋಡಿಯನ್ನು 7-6 (3), 6-2 ಅಂತರದಿಂದ ಮಣಿಸಿದರು. ಇವರ ಸ್ಪರ್ಧೆ ಒಂದು ಗಂಟೆ, 24 ನಿಮಿಷಗಳ ಕಾಲ ಸಾಗಿತು.

ಮೊದಲ ಸೆಟ್‌ ತೀವ್ರ ಪೈಪೋಟಿಯಿಂದ ಕೂಡಿತ್ತು. ಇದು ಟೈ ಬ್ರೇಕರ್‌ ತನಕ ಸಾಗಿತು. ಇಲ್ಲಿ ಇಂಡೋ-ಉಕ್ರೇನಿಯನ್‌ ಜೋಡಿಗೆ ಅದೃಷ್ಟ ಒಲಿಯಿತು. ಆದರೆ ದ್ವಿತೀಯ ಸೆಟ್‌ನಲ್ಲಿ ಎದುರಾಳಿಯಿಂದ ಯಾವುದೇ ಪ್ರತಿರೋಧ ಎದುರಾಗಲಿಲ್ಲ.
ಶನಿವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಸಾನಿಯಾ-ನಾದಿಯಾ ಜೋಡಿ 2ನೇ ಶ್ರೇಯಾಂಕದ ಚೀನೀ ಜೋಡಿಯಾದ ಶುಯಿ ಪೆಂಗ್‌- ಶುಯಿ ಜಾಂಗ್‌ ಎದುರು ಪ್ರಶಸ್ತಿ ಸೆಣಸಾಟ ನಡೆಸಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ