ಸಾತ್ವಿಕ್ ಸಾಯಿರಾಜ್-ಚಿರಾಗ್ ಸೆಮಿಫೈನಲಿಗೆ
ಥಾೖಲಂಡ್ ಓಪನ್: ಪುರುಷರ ಡಬಲ್ಸ್ನಲ್ಲಿ
Team Udayavani, Aug 3, 2019, 5:07 AM IST
ಬ್ಯಾಂಕಾಕ್: ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಥಾೖಲಂಡ್ ಓಪನ್ನ ಪುರುಷರ ಡಬಲ್ಸ್ನಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಮಾಡಿದ್ದಾರೆ.
ಅರ್ಹತಾ ಆಟಗಾರರಾದ ಕೊರಿಯದ ಚೊಯ್ ಸೊಗ್ಯು ಮ ತ್ತು ಸೀ ಸಿಯುಂಗ್ ಜೆ ಅವರನ್ನು 21-17, 17-21, 21-19 ಗೇಮ್ಗಳ ಕಠಿನ ಹೋರಾಟದಲ್ಲಿ ಸಾತ್ವಿಕ್-ಚಿರಾಗ್ ಉರುಳಿಸಿದರು. ಶ್ರೇಯಾಂ ಕರಹಿತ ಆಟಗಾರರಾದ ಸಾತ್ವಿಕ್-ಚಿರಾಗ್ ಗೆಲುವು ದಾಖಲಿಸಲು ಸರಿಯಾಗಿ ಒಂದು ತಾಸು ತೆಗೆದುಕೊಂಡರು.
ಸಾತ್ವಿಕ್-ಚಿರಾಗ್ ಶನಿವಾರ ನಡೆಯುವ ಸೆಮಿಫೈನಲ್ ಹೋರಾಟದಲ್ಲಿ ಕೊರಿಯದ ಕೊ ಸಂಗ್ ಹ್ಯುನ್ ಮತ್ತು ಶಿನ್ ಬ್ಯಾಕ್ ಚೋಲ್ ಅವರನ್ನು ಎದುರಿಸಲಿದ್ದಾರೆ.
ಸಾಯಿ ಪ್ರಣೀತ್ಗೆ ಸೋಲು
ಇದೇ ವೇಳೆ ಸಾಯಿ ಪ್ರಣೀತ್ ಸೋಲುವುದರೊಂದಿಗೆ ಸಿಂಗಲ್ಸ್ನಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪ್ರಣೀತ್ ಅವರು ಜಪಾನಿನ ಏಳನೇ ಶ್ರೇಯಾಂಕದ ಕೆಂಟ ಟಿಸುನೆಯಾಮ ಅವರಿಗೆ 18-21, 12-21 ಗೇಮ್ಗಳಿಂದ ಶರಣಾದರು.
ಅಶ್ವಿನಿ ಪೊನ್ನಪ್ಪ ಜತೆಗೂಡಿ ಮಿಕ್ಸೆಡ್ ಡಬಲ್ಸ್ನಲ್ಲಿ ಆಡಿದ್ದ ಸಾತ್ವಿಕ್ ಸಾಯಿರಾಜ್ರಾಂಕಿರೆಡ್ಡಿ ಅವರು ಕ್ವಾರ್ಟರ್ಫೈನಲ್ನಲ್ಲಿ ಸೋತು ಕೂಟದಿಂದ ನಿರ್ಗಮಿಸಿದರು. ಅವರು ಜಪಾನಿನ ಮೂರನೇ ಶ್ರೇಯಾಂಕದ ಯುಟಾ ವಾಟನಾಬೆ ಮತ್ತು ಅರಿಸಾ ಹಿಗಾಶಿನೊ ಅವರಿಗೆ 13-21, 15-21 ಗೇಮ್ಗಳಿಂದ ಸೋತು ಹೊರಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ
Delhi: ದುಬಾರಿ ಮರ್ಸಿಡೆಸ್ ಕಾರಿನಲ್ಲಿ ಡ್ರಗ್ಸ್ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ