ಚಾಂಪಿಯನ್‌ ಪಟ್ಟ ಅಲಂಕರಿಸಿದ ಸೌರಭ್‌ ವರ್ಮ

ಹೈದರಾಬಾದ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿ

Team Udayavani, Aug 12, 2019, 5:29 AM IST

ಹೈದರಾಬಾದ್‌: ಹಾಲಿ ರಾಷ್ಟ್ರೀಯ ಚಾಂಪಿಯನ್‌ ಸೌರಭ್‌ ವರ್ಮ ‘ಹೈದರಾಬಾದ್‌ ಓಪನ್‌’ ಬ್ಯಾಡ್ಮಿಂಟನ್‌ ಕಿರೀಟ ಏರಿಸಿಕೊಂಡಿದ್ದಾರೆ. ರವಿವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ರೋಚಕ ಫೈನಲ್ನಲ್ಲಿ ಅವರು ಸಿಂಗಾಪುರದ ಲೊಹ್‌ ಕೀನ್‌ ವ್ಯೂ ವಿರುದ್ಧ 21-13, 14-21, 21-16 ಅಂತರದ ಗೆಲುವು ಸಾಧಿಸಿದರು.

ಸೌರಭ್‌ ಮತ್ತು ವಿಶ್ವದ 44ನೇ ರ್‍ಯಾಂಕಿಂಗ್‌ ಆಟಗಾರ ವ್ಯೂ ನಡುವಿನ ಫೈನಲ್ 52 ನಿಮಿಷಗಳ ತನಕ ಸಾಗಿತು. 26ರ ಹರೆಯದ ಮಧ್ಯಪ್ರದೇಶದ ಶಟ್ಲರ್‌ ಮೇ ತಿಂಗಳಲ್ಲಿ ಸ್ಲೊವೇನಿಯನ್‌ ಓಪನ್‌ ಪ್ರಶಸ್ತಿ ಗೆದ್ದು ಸುದ್ದಿಯಾಗಿದ್ದರು. ಕಳೆದ ವರ್ಷ ಡಚ್ ಓಪನ್‌ ಮತ್ತು ರಶ್ಯನ್‌ ಓಪನ್‌ ಚಾಂಪಿಯನ್‌ ಆಗಿದ್ದರು. ಈಗ ತಮ್ಮ ಸಾಧನೆಯ ಕಿರೀಟಕ್ಕೆ ತವರಿನ ಗರಿಯೊಂದನ್ನು ಸಿಕ್ಕಿಸಿಕೊಂಡಿದ್ದಾರೆ.

ಸೌರಭ್‌ ಭರ್ಜರಿ ಆರಂಭ
ಸೌರಭ್‌ ವರ್ಮ ಅವರದು ಭರವಸೆಯ ಆರಂಭವಾಗಿತ್ತು. 6-2ರ ಮುನ್ನಡೆ ಬಳಿಕ 11-4ರ ಭರ್ಜರಿ ಲೀಡ್‌ ಗಳಿಸಿದರು. ಹೀಗಾಗಿ ಮೊದಲ ಗೇಮ್‌ ಸುಲಭದಲ್ಲೇ ಭಾರತೀಯನ ವಶವಾಯಿತು.

ದ್ವಿತೀಯ ಗೇಮ್‌ನಲ್ಲೂ ಸೌರಭ್‌ 5-0 ಮುನ್ನಡೆಯೊಂದಿಗೆ ಮುನ್ನುಗ್ಗಿದರು. ಬಳಿಕ ವ್ಯೂ ಆಕ್ರಮಣಕಾರಿ ಆಟಕ್ಕಿಳಿದು 10-10 ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ವಿರಾಮದ ಬಳಿಕ ಸಿಂಗಾಪುರ್‌ ಶಟ್ಲರ್‌ ಮೇಲುಗೈ ಸಾಧಿಸಿ ಪಂದ್ಯವನ್ನು ಸಮಬಲಕ್ಕೆ ತಂದರು.

ನಿರ್ಣಾಯಕ ಗೇಮ್‌ ತೀವ್ರ ಪೈಪೋಟಿ ಯಿಂದ ಕೂಡಿತ್ತು. ಬ್ರೇಕ್‌ ವೇಳೆ ಸೌರಭ್‌ 11-10 ಅಂತರದ ಸಣ್ಣ ಮುನ್ನಡೆ ಹೊಂದಿದ್ದರು. ಬಳಿಕ ಇದನ್ನು ವಿಸ್ತರಿಸುತ್ತ ಸಾಗಿ ವ್ಯೂಗೆ ಬಾಗಿಲು ಮುಚ್ಚುವಲ್ಲಿ ಯಶಸ್ವಿಯಾದರು.

ಅಶ್ವಿ‌ನಿ-ಸಿಕ್ಕಿ ರೆಡ್ಡಿ ಪರಾಭವ
ವನಿತಾ ಡಬಲ್ಸ್‌ನಲ್ಲಿ ಭಾರತದ ಅಗ್ರ ಶ್ರೇಯಾಂಕದ ಅಶ್ವಿ‌ನಿ ಪೊನ್ನಪ್ಪ-ಎನ್‌. ಸಿಕ್ಕಿ ರೆಡ್ಡಿ ಫೈನಲ್ ಪಂದ್ಯದಲ್ಲಿ ಎಡವಿ ಪ್ರಶಸ್ತಿ ವಂಚಿತರಾದರು. ಕೊರಿಯಾದ ಬೇಕ್‌ ಹಾ ನಾ-ಜಂಗ್‌ ಕ್ಯುಂಗ್‌ ಯುನ್‌ ವಿರುದ್ಧ ಇವರು 17-21, 17-21 ನೇರ ಗೇಮ್‌ಗಳಲ್ಲಿ ಪರಾಭವಗೊಂಡರು.

ನನಗೆ ಯಾರೂ ಪ್ರಾಯೋಜಕರಿಲ್ಲ. ಯಾರಿಂದಲೂ ನೆರವು ಲಭಿಸಿಲ್ಲ. ಭಾರತವನ್ನು ಪ್ರತಿನಿಧಿಸಿದರೂ ಪರಿಸ್ಥಿತಿ ಬದಲಾಗಿಲ್ಲ. ಕೂಟದ ಖರ್ಚನ್ನೆಲ್ಲ ನಾನೇ ನೋಡಿಕೊಳ್ಳುತ್ತಿದ್ದೇನೆ. ಈ ಬಗ್ಗೆ ಚಿಂತಿಸದೆ ನನ್ನ ಪಂದ್ಯಗಳತ್ತ ಮಾತ್ರ ಗಮನ ಹರಿಸುತ್ತಿದ್ದೇನೆ.
– ಸೌರಭ್‌ ವರ್ಮ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ