ದ್ವಿತೀಯ ಸುತ್ತಿಗೆ ಪ್ರಜ್ಞೇಶ್ 

Team Udayavani, Aug 20, 2019, 5:02 AM IST

ಹೊಸದಿಲ್ಲಿ: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಪ್ರಜ್ಞೇಶ್ ಗುಣೇಶ್ವರನ್‌ ನಾರ್ತ್‌ ಕ್ಯಾರೋಲಿನಾದಲ್ಲಿ ನಡೆಯುತ್ತಿರುವ “ವಿನ್‌ಸ್ಟನ್‌ ಸಲೇಮ್‌ ಓಪನ್‌ ಎಟಿಪಿ ಟೆನಿಸ್‌’ ಪಂದ್ಯಾವಳಿ ಯಲ್ಲಿ ದ್ವಿತೀಯ ಸುತ್ತು ಪ್ರವೇಶಿಸಿದ್ದಾರೆ.

ರವಿವಾರ ರಾತ್ರಿಯ ಮೊದಲ ಸುತ್ತಿನ ಪಂದ್ಯದಲ್ಲಿ 89ನೇ ರ್‍ಯಾಂಕಿಂಗ್‌ನ  ಪ್ರಜ್ಞೇಶ್  ಜರ್ಮನಿಯ ಎದುರಾಳಿ ಸೆಡ್ರಿಕ್‌ ಮಾರ್ಸೆಲ್‌ ಸ್ಟೆಬ್‌ ಅವರನ್ನು 6-3, 6-4 ಅಂತರದಿಂದ ಪರಾಭವಗೊಳಿಸಿದರು. ಇವರ ಮುಂದಿನ ಎದುರಾಳಿ ಫ್ರಾನ್ಸ್‌ನ ಬೆನೊಯಿಟ್‌ ಪೇರ್‌. 30ನೇ ರ್‍ಯಾಂಕಿಂಗ್‌ನ ಪೇರ್‌ಗೆ ಮೊದಲ ಸುತ್ತಿನ ಬೈ ಲಭಿಸಿದೆ.ಕಳೆದ ಇಂಡಿಯಾನ ವೆಲ್ಸ್‌ ಎಟಿಪಿ ಮಾಸ್ಟರ್ ಪಂದ್ಯಾವಳಿಯಲ್ಲಿ ಪೇರ್‌ಗೆಸೋಲುಣಿಸಿದ  ಪ್ರಜ್ಞೇಶ್ , ತಮ್ಮ ಟೆನಿಸ್‌ ಬದುಕಿನ ದೊಡ್ಡ ಗೆಲುವನ್ನು ದಾಖಲಿಸಿದ್ದರು. ಇದನ್ನು ಪುನರಾವರ್ತಿ ಸುವರೇ ಎಂಬುದೊಂದು ಕುತೂಹಲ.

ಡಬಲ್ಸ್‌ನಲ್ಲಿ ಸೋಲು
ಇದೇ ಕೂಟದ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ-ದಿವಿಜ್‌ ಶರಣ್‌ ಮೊದಲ ಸುತ್ತಿನಲ್ಲೇ ಪರಾಭವಗೊಂಡರು. ಅಮೆರಿಕದ ನಿಕೋಲಸ್‌ ಮೊನ್ರೊ-ಟೆನ್ನಿಸ್‌ ಸ್ಯಾಂಡ್‌ಗೆÅನ್‌ 6-3, 6-3ರಿಂದ ಭಾರತೀಯ ಜೋಡಿಯನ್ನು ಮಣಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ