ಸೆರೆನಾಗೆ ಸಾಧಿಸಿದರೆ ಸಂತೋಷ: ಮಾರ್ಗರೇಟ್
Team Udayavani, Jan 14, 2019, 12:35 AM IST
ಮೆಲ್ಬರ್ನ್: “ಸೆರೆನಾ ನನ್ನ ದಾಖಲೆಯನ್ನು ಸರಿದೂಗಿಸುವ ಸಾಧ್ಯತೆ ಇದೆ, ಸಾಮರ್ಥ್ಯವೂ ಇದೆ. ಇದನ್ನು ಸೆರೆನಾ ಸಾಧಿಸಿದ ಕಾರಣಕ್ಕೆ ನನಗೆ ಹೆಚ್ಚು ಸಂತೋಷವಾಗಲಿದೆ. ಆದರೆ ಇಲ್ಲಿ ತೀವ್ರ ಪೈಪೋಟಿ ಇದೆ. ಹೀಗಾಗಿ ಸೆರೆನಾ ನೆಚ್ಚಿನ ಆಟಗಾರ್ತಿ ಎಂದೇನೂ ನನಗನಿಸದು’ ಎಂದಿದ್ದಾರೆ, ಆಸ್ಟ್ರೇಲಿಯದ ದಾಖಲೆಗಳ ಒಡತಿ ಮಾರ್ಗರೇಟ್ ಕೋರ್ಟ್.
“ಇದೊಂದು ಮುಕ್ತ ಪಂದ್ಯಾವಳಿ. ಇಲ್ಲಿ ಯಾರೂ ಫೇವರೆಟ್ ಅಲ್ಲ. ಹೀಗಾಗಿ ಯಾರೂ ಗೆಲ್ಲಬಹುದು’ ಎಂದು ಕೋರ್ಟ್ ಅಭಿಪ್ರಾಯಪಟ್ಟರು. ಕಾಂಗರೂ ನಾಡಿನ ಈ ಸಾಧಕಿಗೆ ಈಗ 76 ವರ್ಷ.
1960-73ರ ಅವಧಿಯಲ್ಲಿ ಮಾರ್ಗರೇಟ್ ಕೋರ್ಟ್ 24 ಗ್ರ್ಯಾನ್ಸ್ಲಾಮ್ ಸಿಂಗಲ್ಸ್ ಗೆದ್ದು ಇತಿಹಾಸ ನಿರ್ಮಿಸಿದ್ದರು. ಇದರಲ್ಲಿ 11 ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳು ಸೇರಿವೆ. ಅಂದಹಾಗೆ, ಬುಕ್ಕಿಗಳ ಪ್ರಕಾರ ಸೆರೆನಾ ವಿಲಿಯಮ್ಸ್ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಎತ್ತುವ “ರೆಡ್-ಹಾಟ್ ಫೇವರೆಟ್’ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಜಯಪ್ರಕಾಶ್ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು
ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ
ಕಾರ್ಗಿಲ್ ಯೋಧ ಮೆಲ್ವಿನ್ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ