ಇಂಡಿಯನ್ ವೆಲ್ಸ್ ಟೆನಿಸ್ ತೃತೀಯ ಸುತ್ತಿಗೆ ಸೆರೆನಾ
Team Udayavani, Mar 10, 2019, 12:30 AM IST
ಇಂಡಿಯನ್ ವೆಲ್ಸ್: ವಿಕ್ಟೋರಿಯ ಅಜರೆಂಕಾ ವಿರುದ್ಧ ಗೆಲುವು ದಾಖಲಿಸುವ ಮೂಲಕ ಆಮೆರಿಕದ ಸೆರೆನಾ ವಿಲಿಯಮ್ಸ್ “ಇಂಡಿಯನ್ ವೆಲ್ಸ್’ ಟೆನಿಸ್ ಕೂಟದ ತೃತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ 10ನೇ ಶ್ರೇಯಾಂಕಿತೆ ಸೆರೆನಾ ವಿಲಿಯಮ್ಸ್ ಬಲೆರೂಸ್ನ ಅಜರೆಂಕಾ ಅವರನ್ನು 7-5, 6-3 ನೇರ ಸೆಟ್ಗಳಿಂದ ಸೋಲಿಸಿದರು. ಆಸ್ಟ್ರೇಲಿಯನ್ ಓಪನ್ ಕ್ವಾರ್ಟರ್ ಫೈನಲ್ ಸೋಲಿನ ಬಳಿಕ ಮೊದಲ ಕೂಟದಲ್ಲಿ ಆಡುತ್ತಿರುವ ಸೆರೆನಾ ಅವರು ದೀರ್ಘಕಾಲದ ಪ್ರತಿಸ್ಪರ್ಧಿ ಅಜರೆಂಕಾ ಅವರನ್ನು ಸೋಲಿಸಲು 2 ಗಂಟೆ 7 ನಿಮಿಷ ತೆಗೆದುಕೊಂಡರು.
ಮುಂದಿನ ಪಂದ್ಯದಲ್ಲಿ ಸೆರೆನಾ ಮತ್ತೋರ್ವ ಮಾಜಿ ವಿಶ್ವ ನಂ. ವನ್, ಸ್ಪೇನ್ ಗಾರ್ಬಿನ್ ಮುಗುರುಜಾ ಅವರನ್ನು ಎದುರಿಸಲಿದ್ದಾರೆ. ಮುಗುರುಜಾ ಅಮೆರಿಕಾದ ಲಾರೆನ್ ಡೇವಿಸ್ ಅವರ ವಿರುದ್ಧ 6-1, 6-3 ಸೆಟ್ಗಳಿಂದ ಗೆಲುವು ದಾಖಲಿಸಿದರು.
ಉಳಿದಂತೆ ರೊಮೇನಿಯಾದ ಸಿಮೋನಾ ಹಾಲೆಪ್, ಎಲಿನಾ ಸ್ವಿಟೋಲಿನಾ, ಕಿಕಿ ಬರ್ಟೆನ್ಸ್ ಮೊದಲಾದವರು ಜಯ ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ.