ಇಂಡಿಯನ್ ವೆಲ್ಸ್ ಟೆನಿಸ್: ಸೆರೆನಾ ಹೋರಾಟ ಅಂತ್ಯ
Team Udayavani, Mar 14, 2018, 8:15 AM IST
ಇಂಡಿಯನ್ ವೆಲ್ಸ್: ದೀರ್ಘ ಸಮಯದ ಬಳಿಕ ಟೆನಿಸ್ ಅಂಗಣಕ್ಕೆ ಮರಳಿದ್ದ ಸೆರೆನಾ ವಿಲಿಯಮ್ಸ್ ಅವರು ಇಂಡಿಯನ್ ವೆಲ್ಸ್ ಟೆನಿಸ್ ಕೂಟದಲ್ಲಿ ತನ್ನ ಅಕ್ಕನೆದುರು ಸೋತು ಹೊರ ಬಿದ್ದಿದ್ದಾರೆ. ಮೂರನೇ ಸುತ್ತಿನ ಪಂದ್ಯದಲ್ಲಿ ವೀನಸ್ ವಿಲಿಯಮ್ಸ್ ಅವರು 6-3, 6-4 ನೇರ ಸೆಟ್ಗಳಿಂದ ಸೆರೆನಾ ಅವರನ್ನು ಸೋಲಿಸಿ ಮುನ್ನಡೆದರು. ಇದು ಇವರಿಬ್ಬರ ನಡುವಣ 29ನೇ ಮುಖಾಮುಖಿಯಾಗಿತ್ತು.
2017ರ ಆಸ್ಟ್ರೇಲಿಯನ್ ಓಪನ್ ಬಳಿಕ ಅವರಿಬ್ಬರು ಪರಸ್ಪರ ಮುಖಾ ಮುಖೀಯಾಗಿರುವುದು ಇದೇ ಮೊದಲ ಸಲವಾಗಿದೆ. ಗರ್ಭಿಣಿ ಯಾಗಿದ್ದರಿಂದ ಸೆರೆನಾ ಆಬಳಿಕ 15 ತಿಂಗಳು ಟೆನಿಸ್ನಿಂದ ದೂರ ಉಳಿದಿದ್ದರು. ಮ್ಯಾಚ್ ಫಿಟ್ನೆಸ್ಗೆ ಮರಳಲು ನಾನು ಪ್ರಯತ್ನಿಸುತ್ತಿದ್ದೇನೆ ಎಂದು ಪಂದ್ಯದ ಬಳಿಕ ಸೆರೆನಾ ನುಡಿದರು.
10ನೇ ಶ್ರೇಯಾಂಕದ ವೀನಸ್ ಈ ಗೆಲುವಿನೊಂದಿಗೆ ಅಂತಿಮ 16ರ ಸುತ್ತಿಗೇರಿದ್ದಾರೆ. ಅಲ್ಲಿ ಅವರು ಅನಾ ಸ್ತಾಸಿಜಾ ಸೆವಸ್ಟೋವಾ ಅವರನ್ನು ಎದುರಿಸಲಿದ್ದಾರೆ. ಸೆವಸ್ಟೋವಾ ಇನ್ನೊಂದು ಪಂದ್ಯದಲ್ಲಿ 12ನೇ ಶ್ರೇಯಾಂಕದ ಜೂಲಿಯಾ ಜಾರ್ಜಸ್ ಅವರನ್ನು 6-3, 6-3 ಸೆಟ್ಗಳಿಂದ ಸೋಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ