ನಜಂ ಸೇಥಿ ಪಿಸಿಬಿ ಚೇರ್ಮನ್
Team Udayavani, Aug 10, 2017, 11:42 AM IST
ಕರಾಚಿ: ನಜಂ ಸೇಥಿ ಅವರು ಪಾಕಿಸ್ಥಾನ ಕ್ರಿಕೆಟ್ ಮಂಡಳಿಯ ಚೇರ್ಮನ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಿಸಿಬಿಯ 10 ಸದಸ್ಯರ ಬೋರ್ಡ್ ಆಫ್ ಗವರ್ನರ್ 69ರ ಹರೆಯದ ಸೇಥಿ ಅವರನ್ನು ಚೇರ್ಮನ್ ಹುದ್ದೆಗೆ ಆಯ್ಕೆ ಮಾಡಿತು. ಈ ಹುದ್ದೆಗೆ ಬೇರೆ ಯಾರೂ ಅರ್ಜಿ ಹಾಕದ ಹಿನ್ನೆಲೆಯಲ್ಲಿ ಸೇಥಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಸೇಥಿ ಅವರು ಶಹರ್ಯಾರ್ ಖಾನ್ ಅವರಿಂದ ಅಧಿಕಾರ ಪಡೆಯಲಿದ್ದಾರೆ. ಶಹರ್ಯಾರ್ ಆರೋಗ್ಯದ ಕಾರಣ ನೀಡಿ ಕೆಲವು ದಿನಗಳ ಹಿಂದೆ ಹುದ್ದೆ ತ್ಯಜಿಸಿದ್ದರು.
ಪಿಸಿಬಿಯ ಸಂವಿಧಾನದಂತೆ ಚೇರ್ಮನ್ ಅವರನ್ನು ಬೋರ್ಡ್ ಆಫ್ ಗವರ್ನರ್ನ ಸದಸ್ಯರು ಆಯ್ಕೆ ಮಾಡಬೇಕಾಗಿದೆ. ಮಾಜಿ ಪ್ರಧಾನ ಮಂತ್ರಿ ನವಾಜ್ ಶರೀಫ್ ಅವರು ಸೇಥಿ ಅವರನ್ನು ಬೋರ್ಡ್ ಆಫ್ ಗವರ್ನರ್ಗೆ ನೇಮಕ ಮಾಡಿದ್ದರಿಂದ ಚೇರ್ಮನ್ ಹುದ್ದೆಗೇರಲು ಅವರಿಗೆ ಸುಲಭವಾಯಿತು.
ಸೇಥಿ ಈ ಹಿಂದೆ ಪಿಸಿಬಿಯ ಪ್ರಭಾರ ಚೇರ್ಮನ್ ಆಗಿ ಕರ್ತವ್ಯ ನಿಭಾಯಿಸಿದ್ದರು. ಝಾಕ ಅಶ್ರಫ್ ಅವರ ಅನುಪಸ್ಥಿತಿ ವೇಳೆ ಪಿಸಿಬಿಯ ವ್ಯವಹಾರಗಳನ್ನು ನೋಡಿಕೊಳ್ಳಲು ಮಧ್ಯಾಂತರ ಚೇರ್ಮನ್ ಒಬ್ಬರನ್ನು ನೇಮಕ ಮಾಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಆದೇಶ ನೀಡಿದ ಹಿನ್ನೆಲೆಯಲ್ಲಿ 2014ರಲ್ಲಿ ಪ್ರಧಾನಿ ಶರೀಫ್ ಅವರು ಸೇಥಿ ಅವರನ್ನು ಪ್ರಭಾರ ಚೇರ್ಮನ್ ಆಗಿ ನೇಮಕ ಮಾಡಿದ್ದರು. ಝಾಕ ಆಶ್ರಫ್ ತನ್ನ ಮೇಲಿನ ಹಗರಣ ಆರೋಪದಿಂದ ಮುಕ್ತರಾದ ಬಳಿಕ ಸೇಥಿ ತನ್ನ ಸ್ಥಾನವನ್ನು ಬಿಟ್ಟುಕೊಡಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ