ಮರಳಿದ ಶಕಿಬ್ಗ ಬಾಂಗ್ಲಾ ನಾಯಕತ್ವ
Team Udayavani, Nov 18, 2018, 6:15 AM IST
ಢಾಕಾ: ಕಳೆದ ಏಶ್ಯ ಕಪ್ ವೇಳೆ ಗಾಯಾಳಾಗಿ ವಿಶ್ರಾಂತಿಯಲ್ಲಿದ್ದ ಆಲ್ರೌಂಡರ್ ಶಕಿಬ್ ಅಲ್ ಹಸನ್ ಈಗ ಆಡಲು ಅಣಿಯಾಗಿದ್ದಾರೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಅವರು ಬಾಂಗ್ಲಾದೇಶ ತಂಡವನ್ನು ಮುನ್ನಡೆಸಲಿದ್ದಾರೆ.
ನ. 22ರಿಂದ ಚಿತ್ತಗಾಂಗ್ನಲ್ಲಿ ನಡೆಯಲಿರುವ ಈ ಟೆಸ್ಟ್ ಪಂದ್ಯಕ್ಕಾಗಿ 13 ಸದಸ್ಯರ ತಂಡವನ್ನು ಪ್ರಕಟಿಸಲಾಗಿದ್ದು, ಬ್ಯಾಟ್ಸ್ಮನ್ ಸೌಮ್ಯ ಸರ್ಕಾರ್ ಮತ್ತು 18ರ ಹರೆಯದ ಆಫ್ಬ್ರೇಕ್ ಬೌಲರ್ ನಯೀಮ್ ಹಸನ್ ಅವರನ್ನು ಸೇರಿಸಿಕೊಳ್ಳಲಾಗಿದೆ. ಲಿಟನ್ ದಾಸ್, ಶಫಿಯುಲ್ ಇಸ್ಲಾಮ್, ನಜ್ಮುಲ್ ಇಸ್ಲಾಮ್ ಅವರನ್ನು ಕೈಬಿಡಲಾಗಿದೆ.
ಬಾಂಗ್ಲಾದೇಶ ಟೆಸ್ಟ್ ತಂಡ: ಶಕಿಬ್ ಅಲ್ ಹಸನ್ (ನಾಯಕ), ಸೌಮ್ಯ ಸರ್ಕಾರ್, ಇಮ್ರುಲ್ ಕಯೆಸ್, ಮೊಹಮ್ಮದ್ ಮಿಥುನ್, ಮೊಮಿನುಲ್ ಹಕ್, ಮುಶ್ಫಿಕರ್ ರಹೀಂ, ಅರೀಫುಲ್ ಹಕ್, ಮಹಮದುಲ್ಲ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ತೈಜುಲ್ ಇಸ್ಲಾಮ್, ಸಯ್ಯದ್ ಖಲೀದ್ ಅಹ್ಮದ್, ನಯೀಮ್ ಹಸನ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..
Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ