ಕ್ವಾರ್ಟರ್ ಪೈನಲ್ಗೆ ಶರಪೋವಾ
Team Udayavani, Jan 3, 2019, 12:30 AM IST
ಶೆಂಜೆನ್: ಇಲ್ಲಿ ನಡೆಯುತ್ತಿರುವ “ಶೆಂಜೆನ್ ಓಪನ್’ ಟೆನಿಸ್ ಕೂಟದಲ್ಲಿ ರಶ್ಯದ ಮರಿಯಾ ಶರಪೋವಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರದ ಪಂದ್ಯದಲ್ಲಿ ಚೀನದ ಯುವ ಎದುರಾಳಿ, 17ರ ಎದುರಾಳಿ ವಾಂಗ್ ಕ್ಸಿಯು ದ್ವಿತೀಯ ಸೆಟ್ನಲ್ಲಿ ಗಾಯಾಳಾಗಿ ಹೊರನಡೆದ ಕಾರಣ ಶರಪೋವಾ ಕ್ವಾರ್ಟರ್ ಫೈನಲ್ಗೆ ತಲುಪಿದರು. ಮೊದಲ ಸೆಟ್ನಲ್ಲಿ ಸೋತ ಶರಪೋವಾ ದ್ವಿತೀಯ ಸೆಟ್ನಲ್ಲಿ 5-2 ಅಂಕಗಳ ಮುನ್ನಡೆಯಲ್ಲಿದ್ದರು.ಕಳೆದ ವರ್ಷ 2 ಜೂನಿಯರ್ ಗ್ರ್ಯಾನ್ಸ್ಲಾಮ್ ಡಬಲ್ಸ್ ಪ್ರಶಸ್ತಿ ಗೆದ್ದ ವಾಂಗ್ ಈ ಬಾರಿಯ ಶೆಂಜೆನ್ ಓಪನ್ ಕೂಟಕ್ಕೆ ವೈಲ್ಡ್ಕಾರ್ಡ್ ಮೂಲಕ ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್ನಲ್ಲಿ ಶರಪೋವಾ ಅಗ್ರ ಶ್ರೇಯಾಂಕಿತ ಅರಿನಾ ಸಬಲೆಂಕಾ ಅವರನ್ನು ಎದುರಿಸಲಿದ್ದಾರೆ.