ಶಶಾಂಕ್‌ ರಾಜೀನಾಮೆ ತಾತ್ಕಾಲಿಕ ಹಿಂದಕ್ಕೆ


Team Udayavani, Mar 25, 2017, 10:26 AM IST

Shashank-Manohar.jpg

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಮುಖ್ಯಸ್ಥ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಶಶಾಂಕ್‌ ಮನೋಹರ್‌ ತಾತ್ಕಾಲಿಕವಾಗಿ ಹಿಂಪಡೆದಿದ್ದಾರೆ. ಐಸಿಸಿ ನಿರ್ದೇಶಕರ ಒಕ್ಕೊರಲ ಮನವಿಯ ಕಾರಣದಿಂದ ಈ ವರ್ಷ ನಡೆಯುವ ವಾರ್ಷಿಕ ಸಮ್ಮೇಳನದ ವರೆಗೆ ಹುದ್ದೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಶಶಾಂಕ್‌ ಮನೋಹರ್‌ ದಿಢೀರನೇ ಐಸಿಸಿಗೆ ರಾಜೀನಾಮೆ ಸಲ್ಲಿಸಿ ಅಚ್ಚರಿ ಮೂಡಿಸಿದ್ದರು.

ಐಸಿಸಿಯ ನಿರ್ದೇಶಕರು ಸಭೆ ನಡೆಸಿ ಶಶಾಂಕ್‌ ರಾಜೀನಾಮೆ ವಾಪಸ್‌ ಪಡೆಯಬೇಕು ಇಲ್ಲವೇ ಕನಿಷ್ಠ ಮುಂದೂಡಬೇಕು ಎಂಬ ಗೊತ್ತುವಳಿ ಸ್ವೀಕರಿಸಿದರು. ಅದನ್ನು ಗೌರವಿಸಿ ಶಶಾಂಕ್‌ ಈ ನಿರ್ಧಾರ ಮಾಡಿದ್ದಾರೆ. 

“ಐಸಿಸಿಯ ಪದಾಧಿಕಾರಿಗಳು ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಗೌರವಿಸುತ್ತೇನೆ. ನನ್ನ ರಾಜೀನಾಮೆ ನಿರ್ಧಾರ ಬದಲಾಗದಿದ್ದರೂ ಐಸಿಸಿ ವಾರ್ಷಿಕ ಸಭೆಯವರೆಗೆ ಮುಂದುವರಿಯುತ್ತೇನೆ’ ಎಂದು ಶಶಾಂಕ್‌ ಹೇಳಿದ್ದಾರೆ.

ರಾಜೀನಾಮೆಗೆ ಬಿಸಿಸಿಐ ಕಾರಣ?: ಶಶಾಂಕ್‌ 2 ವರ್ಷದ ಅವಧಿಗೆ ಐಸಿಸಿ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದರು. ಆದರೆ 8 ತಿಂಗಳಿಗೇ ರಾಜೀನಾಮೆ ನೀಡಿದರು. ಇದಕ್ಕೆ ಬಿಸಿಸಿಐ ಕಾರಣ ಎನ್ನಲಾಗಿದೆ. ಐಸಿಸಿ ಬಿಗ್‌ ತ್ರೀ ಆದಾಯ ಹಂಚಿಕೆ ನೀತಿ ರದ್ದತಿ ಸೇರಿದಂತೆ ಕೆಲವು ನಿರ್ಣಯಗಳನ್ನು ಜಾರಿ ಮಾಡಲು ತೀರ್ಮಾನಿಸಿತ್ತು. ಇದು ಸಾಧ್ಯವಾಗಲು ಐಸಿಸಿಗೆ 3ನೇ 2ರಷ್ಟು ಸದಸ್ಯರ ಬೆಂಬಲ ಬೇಕು. ಈ ನಿರ್ಧಾರ ವಿರೋಧಿಸುತ್ತಿರುವ ಬಿಸಿಸಿಐ ತನ್ನನ್ನು ಸೇರಿ 4 ಸದಸ್ಯರ ಬೆಂಬಲ ಹೊಂದಿದೆ. ಇದರಿಂದ ಐಸಿಸಿ ಗೊತ್ತುವಳಿಗೆ ಸೋಲಾಗಲಿದೆ. ಈ ಅವಮಾನದಿಂದ ಪಾರಾಗಲು ಶಶಾಂಕ್‌ ರಾಜೀನಾಮೆ ನಿರ್ಧಾರ ಮಾಡಿದ್ದಾರೆಂದು ಉನ್ನತ ಮೂಲಗಳು ವರದಿ ಮಾಡಿವೆ.ಇದೇ ವೇಳೆ ಆಸ್ಟ್ರೇಲಿಯ ಕ್ರಿಕೆಟ್‌ ಮಂಡಳಿ ಶಶಾಂಕ್‌ಗೆ ಪೂರ್ಣ ಬೆಂಬಲ ನೀಡಿದೆ. ಶಶಾಂಕ್‌ ಈ ಸ್ಥಾನದಲ್ಲಿ ವಾರ್ಷಿಕ ಸಮ್ಮೇಳನದವರೆಗೆ ಮುಂದುವರಿಯುವ ನಿರ್ಧಾರ ಮಾಡಿರುವುದರಿಂದ ಸಂತೋಷಗೊಂಡಿದ್ದೇವೆಂದು ಅದರ ಮುಖ್ಯಸ್ಥ ಡೇವಿಡ್‌ ಪೀವರ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

1-wewqwewq

IPL; ಲಕ್ನೋ ಸೂಪರ್‌ ಜೈಂಟ್ಸ್‌ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ

1-ewewewq

IPL; ಆಸ್ಟ್ರೇಲಿಯನ್‌ ಆಲ್‌ರೌಂಡರ್‌ ಮಾರ್ಷ್‌ ಔಟ್‌

Kohli IPL 2024

IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್‌ ನೀಡಿದ ಆರ್‌ಸಿಬಿ!

1-eewqewqe

IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

Lok Sabha Election; 28 ಕ್ಷೇತ್ರದಲ್ಲೂ ಗೆಲ್ಲುತ್ತೇವೆ: ಬಿಎಸ್‌ವೈ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

nenapirali prem as police in new movie

Kannada Cinema; ಹೊಸ ಚಿತ್ರದಲ್ಲಿ ಖಡಕ್ ಪೊಲೀಸ್ ಆದ ನೆನಪಿರಲಿ ಪ್ರೇಮ್

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.