“ಸೆಲ್ಯೂಟ್ಮ್ಯಾನ್’ನಿಂದ ಧೋನಿಗೆ ಸೆಲ್ಯೂಟ್!
Team Udayavani, Jul 30, 2019, 5:50 AM IST
ಹೊಸದಿಲ್ಲಿ: ವಿಶ್ವಕಪ್ ಕೂಟದಲ್ಲಿ ವಿಕೆಟ್ ಕಿತ್ತಾಗ ಸೆಲ್ಯೂಟ್ ಹೊಡೆದು ಸಂಭ್ರಮಿಸುತ್ತಿದ್ದ ವೆಸ್ಟ್ ಇಂಡೀಸ್ನ ಬೌಲರ್ ಶೆಲ್ಡನ್ ಕಾಟ್ರೆಲ್ ಇದೀಗ ಮಹೇಂದ್ರ ಸಿಂಗ್ ಧೋನಿಗೆ ಅಭಿಮಾನದ ಸೆಲ್ಯೂಟ್ ಹೊಡೆದಿದ್ದಾರೆ.
ಸೇನೆಯ ಗೌರವ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿರುವ ಧೋನಿ 15 ದಿನ ಕಾಶ್ಮೀರದಲ್ಲಿ ಸೇನೆಯ ಸಮವಸ್ತ್ರ ಧರಿಸಿ ಗಾರ್ಡ್ ಆಗಿ ಮತ್ತು ಸೇನಾ ಪೋಸ್ಟ್ನಲ್ಲಿ ಕರ್ತವ್ಯ ನಿಭಾಯಿಸಲಿದ್ದಾರೆ.
ಈ ಸುದ್ದಿ ತಿಳಿದ ಮಾಜಿ ಸೈನಿಕರೂ ಆಗಿರುವ ಕಾಟ್ರೆಲ್ಗೆ ಧೋನಿ ಮೇಲೆ ಅಭಿಮಾನ ಉಕ್ಕಿ ಬಂದಿದೆ. ಸರಣಿ ಟ್ವೀಟ್ಗಳಲ್ಲಿ ಧೋನಿಯನ್ನು ಅಭಿನಂದಿಸಿರುವ ಅವರು, “ಈ ವ್ಯಕ್ತಿ ನಿಜವಾದ ಸ್ಫೂರ್ತಿ’ ಎಂದು ಶ್ಲಾ ಸಿದ್ದಾರೆ.
ಧೋನಿ ಎಲ್ಲರಿಗೂ ಸ್ಫೂರ್ತಿ
“ಮೈದಾನದಲ್ಲಿ ಧೋನಿ ಸ್ಪೂರ್ತಿ ತುಂಬುವುದನ್ನು ನೋಡಿದ್ದೇನೆ. ಆದರೆ ಅವರ ದೇಶಭಕ್ತಿ ಮತ್ತು ತಾಯ್ನಾಡಿನ ಮೇಲಿರುವ ಮಮತೆಯನ್ನು ನೋಡಿದ ಬಳಿಕ ಅವರು ಎಲ್ಲರಿಗೂ ಸ್ಫೂರ್ತಿಯಾಗುವಂಥ ವ್ಯಕ್ತಿ ಎಂದು ತಿಳಿಯಿತು. ಅವರ ಈ ಕಾರ್ಯವನ್ನು ನೋಡಿ ಮನತುಂಬಿದೆ’ ಎಂದಿರುವ ಕಾಟ್ರೆಲ್, 2011ರಲ್ಲಿ ರಾಷ್ಟ್ರಪತಿಯವರು ಧೋನಿಗೆ ಸೇನಾ ಪದವಿ ಪ್ರದಾನ ಮಾಡಿದ ವೀಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ನ (ಪ್ಯಾರಾ) ಗೌರವ ಹುದ್ದೆಯನ್ನು ಹೊಂದಿರುವ ಧೋನಿ ಜು. 31ರಿಂದ ಆ. 15ರ ತನಕ ಸಿಪಾಯಿಯಾಗಿ ಕರ್ತವ್ಯ ನಿಭಾಯಿಸಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ
Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!