ಬೀದಿ ನಾಯಿಗೆ ತುತ್ತು ಹಾಕಿದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್
Team Udayavani, Apr 9, 2020, 11:01 AM IST
ಸೌರಾಷ್ಟ್ರ: ಕೋವಿಡ್-19 ವೈರಸ್ ಬಿಸಿ ಮನುಷ್ಯರಿಗೆ ಮಾತ್ರವಲ್ಲ, ಮೂಕ ಪ್ರಾಣಿಗಳಿಗೂ ತಟ್ಟಿದೆ. ಹೌದು, ಅದೆಷ್ಟೋ ಬೀದಿ ನಾಯಿಗಳು ಅನ್ನ ಆಹಾರವಿಲ್ಲದೆ ದಿನನಿತ್ಯ ಪ್ರಾಣ ಬಿಡುತ್ತಿವೆ.
ಇಂತಹ ಸಂದರ್ಭದಲ್ಲಿ ಬೀದಿ ನಾಯಿಗಳ ಹಸಿವಿನ ಕೂಗಿಗೆ ಸೌರಾಷ್ಟ್ರದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್ ಸ್ಪಂದಿಸಿದ್ದಾರೆ. ಬಿಸ್ಕತ್ ಸೇರಿದಂತೆ ಕೆಲವು ಆಹಾರ ಸಾಮಗ್ರಿಗಳನ್ನುತಮ್ಮ ಕಾರಿನಲ್ಲಿ ತುಂಬಿಕೊಂಡು ಸೌರಾಷ್ಟ್ರದ ಬೀದಿಗಳಲ್ಲಿ ಒಂದು ಸುತ್ತು ಹಾಕಿದ ಬ್ಯಾಟ್ಸ್ಮನ್ ಬೀದಿ ನಾಯಿಗಳ ಹಸಿವು ನೀಗಿಸಿ ಮಾನವೀಯತೆ ಮೆರೆದಿದ್ದಾರೆ.
ಇದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲಿ ವಾಸಿಸುವ ಬಡವರಿಗೂ ಜಾಕ್ಸನ್ ಆಹಾರ ಹಂಚಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸೌರಾಷ್ಟ್ರ ತಂಡದ ಪರವಾಗಿ ಆಡುವ ಶೆಲ್ಡನ್ ಜ್ಯಾಕ್ಸನ್ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡುತ್ತಾರೆ.
ಕ್ರಿಕೆಟಿಗರಾದ ಗೌತಮ್ ಗಂಭಿರ್, ಸುರೇಶ್ ರೈನಾ, ಸಚಿನ್ ತೆಂಡೂಲ್ಕರ್ ಮುಂತಾದವರು ಕೋವಿಡ್-19 ವಿರುದ್ಧದ ಹೋರಾಟಕ್ಕೆ ಹಣಕಾಸಿನ ನೆರವು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್