ಆಧುನಿಕ ಯುಗದಲ್ಲಿ ಈ ಭಾರತೀಯನಿಗೆ ಬೌಲಿಂಗ್ ಮಾಡಲು ಕಷ್ಟವಂತೆ

Team Udayavani, Nov 18, 2019, 11:27 AM IST

ಹೊಸದಿಲ್ಲಿ: ಆಧುನಿಕ ಕ್ರಿಕೆಟ್ ನಲ್ಲಿ ಬೌಲಿಂಗ್ ಮಾಡಲು ಯಾವ ಬ್ಯಾಟ್ಸಮನ್ ಗೆ ಕಷ್ಟ ಎಂದು ಕೇಳಲಾದ ಪ್ರಶ್ನೆಗೆ ಪಾಕಿಸ್ಥಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಓರ್ವ ಭಾರತೀಯನ್ನು ಹೆಸರಿಸಿದ್ದಾರೆ.

ಶೋಯೇಬ್ ಅಖ್ತರ್ ರವಿವಾರ ಟ್ವಿಟರ್ ನಲ್ಲಿ ಅಭಿಮಾನಿಗಳಿಗೆ ಏನಾದರೂ ಪ್ರಶ್ನೆ ಕೇಳಿದರೆ ಉತ್ತರಿಸುವುದಾಗಿ ಹೇಳಿದ್ದರು. ಅದರಲ್ಲಿ ಅಭಿಮಾನಿಯೊಬ್ಬ, ಆಧುನಿಕ ಯುಗದಲ್ಲಿ ಬೌಲಿಂಗ್ ಮಾಡಲು ಯಾವ ಬ್ಯಾಟ್ಸಮನ್ ಗೆ ಕಷ್ಟ ಎಂದು ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ರಾವಲ್ಪಿಂಡಿ ಎಕ್ಸ್ ಪ್ರೆಸ್ ಅಖ್ತರ್, ಭಾರತೀಯ ನಾಯಕ ವಿರಾಟ್ ಕೊಹ್ಲಿಯನ್ನು ಹೆಸರಿಸಿದ್ದಾರೆ. ಕೊಹ್ಲಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದಿದ್ದಾರೆ.

ಶೋಯೇಬ್ ಅಖ್ತರ್ ಈ ಹಿಂದೆಯೂ ಅನೇಕ ಬಾರಿ ವಿರಾಟ್ ಕೊಹ್ಲಿ ಹೊಗಳಿ ಮಾತನಾಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ